ಯುವಕ ನಾಪತ್ತೆ
ಮಂಜೇಶ್ವರ: ಯುವಕ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಜತ್ತೂರು ನಿವಾಸಿ ಮೂಸರ ಪುತ್ರ ನೌಶಾದ್ (31) ನಾಪತ್ತೆಯಾದ ವರು. ಈ ತಿಂಗಳ 19ರಂದು ರಾತ್ರಿ 7 ಗಂಟೆಗೆ ಇವರು ಮನೆಯಿಂದ ಹೊರಹೋಗಿದ್ದು, ಬಳಿಕ ಮರಳಿರ ಲಿಲ್ಲ. ವಿವಿಧ ಕಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರ ಹನೀಫ್ ದೂರು ನೀಡಿದ್ದು, ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನಾಪತ್ತೆ ಯಾಗುವಾಗ ಕಾಫಿ ಕಲರ್ ಜುಬ್ಬಾ, ಪ್ಯಾಂಟ್ ಧರಿಸಿದ್ದು, ಇವರ ಪತ್ತೆಯಾದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ತಿಳಿಸಿದ್ದಾರೆ.