ಮಂಜೇಶ್ವರ ತಾಲೂಕು ಮಟ್ಟದ ಅದಾಲತ್ ಆರಂಭ: ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಉದ್ಘಾಟನೆ
ಉಪ್ಪಳ: ರಾಜ್ಯ ಸರಕಾರದ ನಾಲ್ಕನೇ ವರ್ಷಾಚರಣೆಯಂಗವಾಗಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲುಗಳನ್ನು ಪರಿಹರಿಸಲು ಮಂಜೇಶ್ವರ ತಾಲೂಕ ಮಟ್ಟದ ಅದಾಲತ್ ಇಂದು ಬೆಳಿಗ್ಗೆ ನಯಾಬಜಾರ್‌ನಲ್ಲಿರುವ ಲಯನ್ಸ್ ಕ್ಲಬ್‌ನಲ್ಲಿ ಆರಂಭಗೊಂಡಿತು.
ಕ್ರೀಡೆ, ಅಲ್ಪಸಂಖ್ಯಾತರ ಕ್ಷೇಮ ವಕ್ಫ್ ಹಾಗೂ ಹಜ್ ತೀರ್ಥಯಾತ್ರಿಕರ ಮತ್ತು ರೈಲ್ವೇ ಇಲಾಖೆ ಸಚಿವ ವಿ. ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದರು. ನೋಂದಾವಣೆ, ವಸ್ತು ಸಂಗ್ರಹಾಲಯ, ಪುರಾತತ್ವ ಇಲಾಖೆ ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಇಂಭಶೇಖರ್ ಕೆ, ಶಾಸಕ ಎಕೆಎಂ ಅಶ್ರಫ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸೈಮ ಸಿ.ಎ, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಲ್ ಸಹಿತ ವಿವಿಧ ಪಂಚಾಯತ್‌ಗಳ ಅಧ್ಯಕ್ಷರು, ವಿವಿಧ ರಾಜಕೀಯ ನೇತಾರರು, ಸಾಮಾಜಿಕ ಕಾರ್ಯಕರ್ತರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.