ಅಡಿಭಾಗದ ಆಧಾರಕಂಬ ಕುಸಿದು 3 ತಿಂಗಳು: ಉರ್ಮಿ ಸೇತುವೆಯ ದುರಸ್ತಿಗೆ ಇನ್ನೂ ಮೀನ-ಮೇಷ

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಲಾಲ್‌ಬಾಗ್- ಕೊಮ್ಮಂಗಳ ರಸ್ತೆಯ ಉರ್ಮಿಯಲ್ಲಿ ಸೇತುವೆಯ ಒಂದು ತುದಿಯ ಅಡಿಭಾಗದ ಕಂಬ ಕುಸಿದು ಬಿದ್ದು ಮೂರು ತಿಂಗಳು ಕಳೆದರೂ ಇನ್ನೂ ದುರಸ್ತಿ ನಡೆಯದಿರುವುದು ಊರವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ಅಕ್ಟೋಬರ್ 12ರಂದು ರಾತ್ರಿ ಕಂಬ ಕುಸಿದು ಬಿದ್ದಿದೆ. ಈ ಸೇತುವೆ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಮಾತ್ರ ಆತಂಕದಿAದಲೇ ಸಂಚರಿಸುತ್ತಿದ್ದರು. ಆದರೆ ಇದೀಗ ವಾಹನಗಳು ಸಂಚರಿಸದAತೆ ತಡೆಗೋಡೆ ನಿರ್ಮಿಸಲಾಗಿದೆ. ಈಗಾಗಲೇ ಮೈನರ್ ಇರಿಗೇಶನ್ ಇಲಾಖೆ ಅಧಿಕಾರಿಗಳು ತಲುಪಿ ಪರಿಶೀಲನೆ ನಡೆಸಿ ಶೀಘ್ರ ದುರಸ್ತಿ ನಡೆಸುವುದಾಗಿ ಭರವಸೆ ನೀಡಿದರೂ ಇದುವರೆಗೂ ದುರಸ್ತಿ ನಡೆಯದಿರುವುದು ಊರವರ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಕೊಮ್ಮಂಗಳ, ಬದಿಯಾರ್, ಪಲ್ಲೆಕೂಡೆಲ್ ಸಹಿತ ವಿವಿಧ ಪ್ರದೇಶಕ್ಕೆ ಕುರುಡಪದವು, ಬಾಯಿಕಟ್ಟೆ ಮೂಲಕ ಸುತ್ತಾಗಿ ಈಗ ಸಂಚರಿಸಬೇಕಾಗುತ್ತಿದೆ. ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ಸೇತುವೆಯನ್ನು ದುರಸ್ತಿ ಮಾಡಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page