ಜಿಲ್ಲೆಯಲ್ಲಿ 10,76,634 ಮತದಾರರು


ಕಾಸರಗೋಡು: ಈ ಜನವರಿ 1ರಂದು ಚುನಾವಣಾ ಆಯೋಗ ಪ್ರಕಟಿಸಿದ ಅಂತಿಮ ಮತದಾರರ ಯಾದಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 10,76,634 ಮತದಾರರಿದ್ದಾರೆ. ಇದರಲ್ಲಿ 5,26,098 ಗಂಡಸರು, 5,50,525 ಮಹಿಳೆಯರು ಹಾಗೂ 11 ಮಂಗಳಮುಖಿಯರು ಒಳಗೊಂ ಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯ ಮತದಾರ ಯಾದಿ ಯಲ್ಲಿ 5,24,880 ಗಂಡಸರು, 5,49,300 ಮಹಿಳೆಯರು ಹಾಗೂ 12 ಮಂಗಳ ಮುಖಿಯರು ಒಳಗೊಂಡಿದ್ದರು.
ವಿವಿಧ ಕಾರಣಗಳಿಂದಾಗಿ ಈ ಹಿಂದಿನ ಮತದಾರ ಪಟ್ಟಿಯಿಂದ 2454 ಮಂದಿಯನ್ನು ಹೊರತುಪಡಿ ಸಲಾಗಿದೆ. ಮಾತ್ರವಲ್ಲ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಾಗಿ 4896 ಮಂದಿಯನ್ನು ಮತದಾರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಅಂದರೆ ಹೊಸ ಮತದಾರ ಯಾದಿಯಲ್ಲಿ ಮತದಾರರ ಸಂಖ್ಯೆಯಲ್ಲಿ 2442ರಷ್ಟು ಹೆಚ್ಚಳ ಉಂಟಾಗಿದೆ. ಹೊಸ ಮತದಾರ ಯಾದಿಯಲ್ಲಿ 80 ವಯಸ್ಸು ಮೀರಿದ 15,423 ಮಂದಿ ಒಳಗೊಂಡಿದ್ದಾರೆ.
ಹೊಸ ಮತದಾರಯಾದಿಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 1,13,069, ಗಂಡಸರು, 1,12,704 ಮಹಿಳೆಯರು ಸೇರಿ ಒಟ್ಟು 2,25,773 ಮಂದಿ ಮತದಾರರಿದ್ದಾರೆ. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ 1,02,311 ಗಂಡಸರು, 1,03,455 ಮಹಿಳೆಯರು, ಒಂದು ಮಂಗಳಮುಖಿ ಸೇರಿದಂತೆ ಒಟ್ಟು 2,05,767 ಮತದಾರರಿದ್ದಾರೆ. ಉದುಮದಲ್ಲಿ 1,07,046 ಗಂಡಸರು, 1,12,204 ಮಹಿಳೆಯರು, 3 ಮಂಗಳಮುಖಿ ಸೇರಿದಂತೆ 2,19,253 ಮಂದಿ ಮತದಾರರು ಒಳಗೊಂಡಿದ್ದಾರೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,21,197 ಮತದಾರರಿದ್ದು, ಇದರಲ್ಲಿ 1,06,193 ಗಂಡಸರು, 1,14,999 ಮಹಿಳೆಯರು ಮತ್ತು ಐದು ಮಂಗಳಮುಖಿಯರು ಒಳಗೊಂಡಿದ್ದಾರೆ.
ಇನ್ನು ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,04,644 ಮತದಾರರಿದ್ದು, ಇದರಲ್ಲಿ 97,479 ಗಂಡಸರು, 1,07,163 ಮಹಿಳೆಯರು ಹಾಗೂ ಇಬ್ಬರು ಮಂಗಳಮುಖಿಯರು ಒಳಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page