ಒಂದು ವಿಭಾಗ ನೌಕರರು, ಅಧ್ಯಾಪಕರಿಂದ ಇಂದು ಮುಷ್ಕರ

ಕಾಸರಗೋಡು: ಕಾಂಗ್ರೆಸ್ ಹಾಗೂ ಸಿಪಿಐ ಬೆಂಬಲಿತ ಸಂಘಟನೆಗಳ ನೇತೃತ್ವದಲ್ಲಿ  ಸರಕಾರಿ ನೌಕರರು ಹಾಗೂ ಅಧ್ಯಾಪಕರು ಇಂದು ಮುಷ್ಕರ ನಿರತರಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಸ್ಟೇಟ್ ಎಂಪ್ಲಾಯೀಸ್  ಆಂಡ್ ಟೀಚರ್ಸ್ ಆರ್ಗನೈಸೇಶನ್ (ಸೆಟ್ಟೋ), ಸಿಪಿಐಯ ಸೇವಾ ಸಂಘಟನೆಯಾದ ಜೋಯಿಂಟ್ ಕೌನ್ಸಿಲ್ ಮುಷ್ಕರ ಘೋಷಿಸಿದೆ. ಇದೇ ವೇಳೆ ಮುಷ್ಕರ ವಿರುದ್ಧ ಸರಕಾರ ಡಯಾಸ್ನೋನ್ ಹೊರಡಿಸಿದೆ.  ಮುಷ್ಕರದಲ್ಲಿ  ಪಾಲ್ಗೊಂಡವರ ವೇತನವನ್ನು ಫೆಬ್ರವರಿ ತಿಂಗಳ ವೇತನದಿಂದ ಕಡಿತಗೊಳಿಸುವುದಾಗಿ ತಿಳಿಸಲಾಗಿದೆ. ಮುಷ್ಕರದಿಂದ ಸರಕಾರಿ ಕಚೇರಿಗಳಲ್ಲಿ ಇಂದು ನೌಕರರ ಸಂಖ್ಯೆಯಲ್ಲಿ ಕಡಿತ ಕಂಡುಬಂದಿದೆ.

You cannot copy contents of this page