ಗಣರಾಜ್ಯೋತ್ಸವ ನಾಳೆ ದಿಲ್ಲಿಯಲ್ಲಿ  ಬಿಗಿ ಭದ್ರತೆ

ನವದೆಹಲಿ: ಭಾರತ ನಾಳೆ 76ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಿದೆ. ಭಾರತವನ್ನು ಗಣರಾಜ್ಯ ವೆಂದು 1950ರಲ್ಲಿ ಭಾರತೀಯ ಸಂವಿಧಾನ  ಅಂಗೀಕರಿಸಿದ ನೆನಪಿಗಾಗಿ ಈ ದಿನ ಆಚರಿಸಲಾಗುತ್ತಿದೆ.

ಗಣರಾಜ್ಯೋತ್ಸವದ ಅಂಗವಾಗಿ ದಿಲ್ಲಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣು ಇರಿಸಿದ್ದಾರೆ. ಕಾಸರಗೋಡು ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ನಾಳೆ ಬೆಳಿಗ್ಗೆ ನಡೆಯುವ ಗಣರಾಜ್ಯೋತ್ಸವದಲ್ಲಿ ರಾಜ್ಯ ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ರಾಷ್ಟ್ರಧ್ವಜ ಹಾರಿಸಿ ಪರೇಡ್‌ನಿಂದ ಧ್ವಜವಂದನೆ ಸ್ವೀಕರಿಸುವರು. ಇದಕ್ಕಾಗಿರುವ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ.

ಗಣರಾಜ್ಯೋತ್ಸವದಂಗವಾಗಿ ರೈಲ್ವೇ ಪೊಲೀಸರು, ರೈಲ್ವೇ ಭದ್ರತಾಪಡೆಯವರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ಸ್ಕ್ವಾಡ್‌ನ ಸಹಾಯದೊಂದಿಗೆ  ಕಾಸರ ಗೋಡು ಸೇರಿದಂತೆ ರಾಜ್ಯದ ಎಲ್ಲೆಡೆ ಗಳಲ್ಲಿ  ಬಿಗಿ ತಪಾಸಣೆಯಲ್ಲಿ  ತೊಡಗಿ,  ಎಲ್ಲೆಡೆ ಕಟ್ಟೆಚ್ಚರ ಪಾಲಿಸತೊಡಗಿದ್ದಾರೆ.

You cannot copy contents of this page