ಹಾಸ್ಟೆಲ್‌ನ ಹೆಸರಲ್ಲಿ 14 ಕೋಟಿ ರೂ.ಲಪಟಾವಣೆ: ಓರ್ವ ಸೆರೆ

ಕಾಸರಗೋಡು: ಹಾಸ್ಟೆಲ್ ನಿರ್ಮಾಣದ ಹೆಸರಲ್ಲಿ ಶೇರ್ ರೂಪದಲ್ಲಿ ಹಲವರಿಂದಾಗಿ 14 ಕೋಟಿ ರೂ. ಪಡೆದು ವಂಚನೆಗೈದಿ ರುವುದಾಗಿ ಆರೋಪಿಸಿ ನೀಡಲಾಗಿ ರುವ ದೂರಿನಂತೆ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಕಾಸರ ಗೋಡು ಉಡುಂಬುತ್ತಿಲ ಹಾಜಿ ಮಾಡಕ್ಕಲ ವೀಟಿಲ್‌ನ ಎಂ.ಕೆ. ಸೈದ್ (49) ಎಂಬಾತನನ್ನು ಕಳಮ ಶ್ಶೇರಿ ಪೊಲೀಸರು ಬಂಧಿಸಿದ್ದಾರೆ.

ಎರ್ನಾಕುಳಂ ಜಿಲ್ಲೆಯ ವಿವಿಧೆಡೆಗಳಲ್ಲಿ ನೈಸ್ ಸ್ಲೀಪ್ ಎಂಬ ಹೆಸರಲ್ಲಿ ಕಾರ್ಯವೆಸಗುತ್ತಿರುವ ಹಾಸ್ಟೆಲ್ ಶೇ.೫೦ರಷ್ಟು ಶೇರುಗಳನ್ನು ನೀಡುವುದಾಗಿ ನಂಬಿಸಿ ಹಲವರಿಂದಾಗಿ ಹಣ ಪಡೆದು ಬಳಿಕ ವಂಚಿಸಿರುವುದಾಗಿ ಆರೋಪಿಸಿ ಹಲವರು ಕಳಮಶ್ಶೇರಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಸೈದ್‌ನನ್ನು ಬಂಧಿಸಿದ್ದಾರೆ. ಈತನ ಮೇಲೆ ಇತರ ಹಲವು ಪೊಲೀಸ್ ಠಾಣೆಗಳಲ್ಲೂ ಇಂತಹ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page