ಕಾಸರಗೋಡು ಗಣೇಶೋತ್ಸವಕ್ಕೆ 71ನೇ ವಾರ್ಷಿಕ ಸಂಭ್ರಮ: 11 ದಿನ ವಿವಿಧ ಕಾರ್ಯಕ್ರಮಗಳು
ಕಾಸರಗೋಡು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಆಗಸ್ಟ್ 27ರಿಂದ ಸೆಪ್ಟಂಬರ್ 6ರ ತನಕ 11 ದಿನಗಳ ಕಾಲ ಶ್ರೀ ಗಣೇಶೋತ್ಸವವನ್ನು ನಡೆಸಲು ಇತ್ತೀಚೆಗೆ ಸೇರಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ. 71ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ನಡೆಸಲು ಸಮಿತಿ ತೀರ್ಮಾನಿಸಿದೆ. ಪ್ರತೀ ದಿನ ೧೦೦೮ ನಾಳೀಕೇರ ಗಣಪತಿ ಯಾಗ ನಡೆದು 10ನೇ ದಿನ ಪೂರ್ಣಾಹುತಿ ಯಾಗಲಿದ್ದು, ಇದನ್ನು ಅಯ್ಯುತ ನಾಳೀಕೇರ ಮಹಾಗಣಪತಿ ಯಾಗ ಎಂದು ಕರೆಯಲಾಗುತ್ತದೆ.ಶ್ರೀಗಣೇಶೋತ್ಸವ ಸಂದರ್ಭ ದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಈ ಬಗ್ಗೆ ತೀರ್ಮಾನಿ ಸಲು ನಡೆದ ಸಭೆಯಲ್ಲಿ ನ್ಯಾಯವಾದಿ ಮುರಳೀಧರನ್ ಅಧ್ಯಕ್ಷತೆ ವಹಿಸಿದ್ದರು. ಜಗನ್ನಾಥ್, ಕಮಲಾಕ್ಷನ್ ಕೆ.ಎನ್, ಸಿ.ವಿ. ಪೊದುವಾಳ್ ಭಾಗವಹಿಸಿದರು