ಸೊಸೈಟಿಗೆ ಹಾಲು ನೀಡಿ ಮರಳುತ್ತಿದ್ದ ಹೈನುಗಾರಿಕಾ ಕೃಷಿಕೆ ಕಾರು ಢಿಕ್ಕಿ ಹೊಡೆದು ಮೃತ್ಯು
ಹೊಸದುರ್ಗ: ಸೊಸೈಟಿಯಲ್ಲಿ ಹಾಲು ನೀಡಿ ಪತಿಯೊಂದಿಗೆ ಮರಳುತ್ತಿದ್ದ ಹೈನುಗಾರಿಕಾ ಕೃಷಿಕೆ ಕಾರುಢಿಕ್ಕಿ ಹೊಡೆದು ಮೃತಪಟ್ಟರು. ಪಯ್ಯ ನ್ನೂರು ಬಳಿಯ ಎರಿಪುರ ನಿವಾಸಿ ವಿಶ್ವನಾಥನ್ರ ಪತ್ನಿ ಭಾನುಮತಿ (58) ಮೃತಪಟ್ಟ ದುರ್ದೈವಿ. ಇಂದು ಬೆಳಿಗ್ಗೆ ಸೊಸೈಟಿಯಲ್ಲಿ ಹಾಲು ನೀಡಿ ಸಮೀಪದ ಹೋಟೆಲ್ನಿಂದ ಹಸುಗಳಿಗೆ ಆಹಾರ ಖರೀದಿಸಿ ರಸ್ತೆ ದಾಟುತ್ತಿದ್ದ ವೇಳೆ ಭಾನುಮತಿ ಯವರಿಗೆ ಕಾರು ಢಿಕ್ಕಿ ಹೊಡೆದಿದೆ. ಅಪರಿಮಿತ ವೇಗದಲ್ಲಿದ್ದ ಕಾರು ಭಾನುಮತಿಯವರನ್ನು 200 ಮೀಟ ರ್ನಷ್ಟು ದೂರಕ್ಕೆ ಎಳೆದೊಯ್ದಿದೆ.
ಮೃತರು ಮಕ್ಕಳಾದ ಲೇಜು ಲೇಖಾ, ಲತಿಕಾ, ಲಿಜೇಶ್, ಅಳಿ ಯಂ ದಿರಾದ ಸಂತೋಷ್ ಕುಮಾರ್ ಕೆ.ವಿ, ಸಂತೋಷ್ ಕುಮಾರ್ ಎಂ, ಸೊಸೆ ಶಾಮಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.