ಕಾಞಂಗಾಡ್‌ನಿಂದ ಬೈಕ್ ಕಳವು: ಉಳಿಯತ್ತಡ್ಕ ನಿವಾಸಿ ಸೆರೆ

ಕಾಸರಗೋಡು: ಕಾಞಂಗಾಡ್  ರೈಲ್ವೇ ನಿಲ್ದಾಣ ಬಳಿಯಿಂದ ಬೈಕ್ ಕಳವುಗೈದ ಯುವಕನನ್ನು ಸೆರೆಹಿಡಿಯಲಾಗಿದೆ. ಮಧೂರು ಉಳಿಯತ್ತಡ್ಕ ನಿವಾಸಿ ರಹೀಸ್ ಅಹಮ್ಮದ್ (19) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಕಾಸರಗೋಡಿನಲ್ಲಿ  ಪೊಲೀಸರು ನಡೆಸಿದ ವಾಹನ ತಪಾಸಣೆ ವೇಳೆ  ಈತ ಸೆರೆಗೀಡಾಗಿದ್ದಾನೆ. ತಪಾಸಣೆ ವೇಳೆ ನಂಬರ್ ಪ್ಲೇಟ್ ಇಲ್ಲದೆ ಬಂದ ಬೈಕ್‌ನ ಮೇಲೆ ಸಂಶಯಗೊಂಡು ನಿಲ್ಲಿಸಿ ತನಿಖೆಗೊಳಪಡಿಸಿದಾಗ ಆರೋಪಿ  ಬೈಕ್ ಕಳವುಗೈದ ಬಗ್ಗೆ ಒಪ್ಪಿಕೊಂಡಿದ್ದಾನೆ. ಕಳೆದ ತಿಂಗಳ ೨೮ರಂದು ಬೈಕ್ ಕಳವಿಗೀಡಾಗಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸ್ಕ್ವಾಡ್ ಸದಸ್ಯರಾದ ನಿಜಿನ್ ಕುಮಾರ್, ರಜೀಶ್ ಕಾಟಂಬಳ್ಳಿ ಎಂಬಿವರನ್ನೊಳಗೊಂಡ ತಂಡ ಆರೋಪಿಯನ್ನು ಸೆರೆಹಿಡಿದಿದೆ.

You cannot copy contents of this page