ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಪರಿಸರದ ಮಟ್ಕಾ ಜೂಜಾಟ ಕೇಂದ್ರಕ್ಕೆ ಕಾಸರಗೋಡು ಪೊಲೀಸರು ದಾಳಿ ನಡೆಸಿ ನುಳ್ಳಿಪ್ಪಾಡಿಯ ಎನ್. ವಿಜೇಶ್ ಮತ್ತು ಕರ್ನಾಟಕದ ಮಂಜು ಎಂಬಿಬ್ಬರನ್ನು 4465 ರೂ.ನೊಂದಿಗೆ ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಕಾಸರಗೋಡು ನಗರದ ಹಲವೆಡೆಗಳಲ್ಲಿ ಮಟ್ಕಾ ದಂಧೆ ನಡೆಯುತ್ತಿದ್ದು, ಅದರ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.