ವೃದ್ಧನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಆರೋಪಿ ಸೆರೆ
ಕಾಸರಗೋಡು: 80 ವರ್ಷದ ಮಾವನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಯನ್ನು ಮೇಲ್ಪ ರಂಬ ಪೊಲೀಸರು ಬಂಧಿಸಿದ್ದಾರೆ.
ಸಿಪಿಎಂ ಮಾಜಿ ನೇತಾರ ಹಾಗೂ ಪುಲ್ಲೂರು ಪೆರಿಯ ಗ್ರಾಮ ಪಂಚಾ ಯತ್‌ನ ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷರಾಗಿದ್ದ ಎನ್. ಕೃಷ್ಣನ್‌ರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಂಬಲತ್ತರ ನಿಲಾಂಕಾ ವಿನ ಎನ್. ಸುರೇಶ್ ಬಾಬು ಅಲಿ ಯಾಸ್ ಸೋಡಾ ಬಾಬು ಎಂಬಾತ ನನ್ನು ಪೊಲೀಸರು ಬಂಧಿಸಿದ್ದಾರೆ.
ಫೆ. 9ರಂದು ತನ್ನ ಮಾವ ಕೃಷ್ಣನ್ ತಮ್ಮ ಹಿತ್ತಿಲಲ್ಲಿ ಮರ ಕಡಿದು ಸಾಗಿಸುತ್ತಿದ್ದು, ಅಲ್ಲಿಗೆ ಆಗಮಿಸಿ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಬೆದರಿಸಿದುದನ್ನು ಕೃಷ್ಣನ್ ಪ್ರಶ್ನಿಸಿದ್ದು ಆ ದ್ವೇಷದಿಂದ ಅವರ ಮೇಲೆ ಆರೋಪಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಆತನ ವಿರುದ್ಧ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿ ಯನ್ನು ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಅಂಬಲತ್ತರ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಹಾಗೂ ಆರ್‌ಎಸ್‌ಎಸ್ ಕಾರ್ಯಾ ವಾಹಕ್ ಆಗಿದ್ದ ವಾಳಕೋಡು ಶಿವಾಜಿ ನಗರದ ಎ. ದಾಮೋದರನ್ ೨೦೦೩ ಜೂನ್ ೨೫ರಂದು ಕೊಲೆಗೈದ ಪ್ರಕರಣ ದಲ್ಲೂ ಸುರೇಶ್ ಆರೋಪಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.