ಬೀದಿನಾಯಿಗಳು ಬೆನ್ನಟ್ಟಿದಾಗ ಓಡಿದ ಮದ್ರಸ ವಿದ್ಯಾರ್ಥಿ ಬಿದ್ದು ಗಾಯ

ಉಪ್ಪಳ: ಮದ್ರಸದಿಂದ ಮನೆಗೆ ನಡೆದು ಹೋಗುತ್ತಿದ್ದ ಮೂರು ವಿದ್ಯಾರ್ಥಿಗಳನ್ನು ನಾಯಿಗಳ ಹಿಂಡು ಬೆನ್ನಟ್ಟಿದ್ದು, ಈ ವೇಳೆ ಓಡುತ್ತಿದ್ದಾಗ ಓರ್ವ ವಿದ್ಯಾರ್ಥಿ ಬಿದ್ದು ಗಾಯಗೊಂಡ ಘಟನೆ ಬಂದ್ಯೋಡು ಬಳಿಯಲ್ಲಿ ನಡೆದಿದೆ. ಬಂದ್ಯೋಡು ಬಳಿಯ ವಯಲ್‌ಕೆರೆ ನಿವಾಸಿ ಆದಂರ ಪುತ್ರ ಮೊಹಮ್ಮದ್ ಮುಫೀದ್ (11) ಗಾಯಗೊಂಡ ವಿದ್ಯಾರ್ಥಿ. ನಿನ್ನೆ ಬಂದ್ಯೋಡು ಮದ್ರಸದಿಂದ ಮೂರು ವಿದ್ಯಾರ್ಥಿಗಳು ಮನೆಗೆ ನಡೆದುಹೋಗುತ್ತಿದ್ದಾಗ ಒಳರಸ್ತೆಯಾದ ವಯಲ್‌ಕೆರೆ ರೋಡ್‌ನಲ್ಲಿ ನಾಯಿಗಳ ಹಿಂಡು ವಿದ್ಯಾರ್ಥಿಗಳನ್ನು ಬೆನ್ನಟ್ಟಿದೆ. ಇದರಿಂದ ಭಯ ಭೀತರಾಗಿ ಮೂವರು ಓಡಿದ್ದು, ಈ ಪೈಕಿ ಮೊಹಮ್ಮದ್ ಮುಫೀದ್ ಬಿದ್ದಿದ್ದಾನೆ. ಮಕ್ಕಳ ಬೊಬ್ಬೆ ಕೇಳಿ ಸ್ಥಳೀಯರು ಓಡಿ ಬಂದು ನಾಯಿಯನ್ನು ಬೆನ್ನಟ್ಟಿದ್ದು, ಕಾಲಿಗೆ, ಕೈಗೆ ಗಾಯಗೊಂಡ ವಿದ್ಯಾರ್ಥಿಯನ್ನು ಬಂದ್ಯೋಡು ಖಾಸಗಿ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಬಂದ್ಯೋಡು ಪೇಟೆ ಹಾಗೂ ಒಳರಸ್ತೆಯಲ್ಲಿ ಸುಮಾರು 20ರಷ್ಟು ಬೀದಿ ನಾಯಿಗಳು ಸುತ್ತಾ ಡುತ್ತಿದ್ದು, ಇದರಿಂದ ಮದ್ರಸ, ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು ಆತಂಕಗೊAಡಿ ದ್ದಾರೆ. ಬೀದಿ ನಾಯಿಗಳ ಕ್ರಮಕ್ಕೆ ಪಂಚಾಯತ್ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page