ಉಪ್ಪಳದಲ್ಲಿ ಕಾವಲುಗಾರನ ಕೊಲೆಗೈದ ಪ್ರಕರಣ : ಆರೋಪಿ 5 ದಿನ ಪೊಲೀಸ್ ಕಸ್ಟಡಿಗೆ

ಉಪ್ಪಳ: ಉಪ್ಪಳ ಮೀನು ಮಾರುಕಟ್ಟೆ ಬಳಿಯ ಕಟ್ಟಡದ ಕಾವಲುಗಾರನನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿಗಳನ್ನು ಐದು ದಿನಗಳ ಕಾಲಕ್ಕೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದೆ. ಉಪ್ಪಳ ಪತ್ವಾಡಿ ನಿವಾಸಿಯಾದ ಸವಾದ್ (24) ಎಂಬಾತನನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್ ಕಸ್ಟಡಿಗೆ ನೀಡಿದೆ. 

ಕೊಲ್ಲಂ ಏಳುಕೋಣ್ ನಿವಾಸಿಯೂ 15 ವರ್ಷಗಳಿಂದ ಪಯ್ಯನ್ನೂರಿನಲ್ಲಿ ವಾಸಿಸುತ್ತಿದ್ದ ಸುರೇಶ್ (48) ಫೆಬ್ರವರಿ 11ರಂದು ರಾತ್ರಿ ಇರಿತಕ್ಕೀಡಾಗಿ ಸಾವನ್ನಪ್ಪಿದ್ದರು.  ಇಬ್ಬರು ಜೊತೆಯಾಗಿ ಮದ್ಯ ಸೇವಿಸುತ್ತಿದ್ದಾಗ ನಡೆದ ವಾಗ್ವಾದ ಕೊಲೆಕೃತ್ಯಕ್ಕೆ ಕಾರಣವಾಗಿದೆಯೆಂದು ಸೆರೆಗೀಡಾದ ಸವಾದ್ ಪೊಲೀಸರಲ್ಲಿ ತಿಳಿಸಿದ್ದನು. ಆದರೆ ಅದನ್ನು ಪೊಲೀಸರು ಪೂರ್ಣವಾಗಿ ನಂಬಲಿಲ್ಲ. ಆದ್ದರಿಂದ ಕೊಲೆ ಕೃತ್ಯಕ್ಕೆ ಬೇರೆ ಯಾವು ದಾದರೂ  ಕಾರಣವಿದೆಯೇ ಎಂದು ಪತ್ತೆಹಚ್ಚಲು ಸವಾದ್‌ನನ್ನು ಸಮಗ್ರ ತನಿಖೆಗೊಳಪಡಿಸಲಾಗುತ್ತಿದೆ.

RELATED NEWS

You cannot copy contents of this page