ದೈವ ಕಲಾವಿದ ಕುಸಿದುಬಿದ್ದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ದೈವ ಕಲಾವಿದರೊ ಬ್ಬರು ತರವಾಡು ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಮಾನ್ಯ ಉಳ್ಳೋಡಿಯ ದಿ| ಮಂಚ ಎಂಬವರ ಪುತ್ರ ಎಂ.ಕೆ. ಕೃಷ್ಣ (57) ಮೃತಪಟ್ಟ ವ್ಯಕ್ತಿ. ತರವಾಡು ಮನೆಯಲ್ಲಿ ಇವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ನಿನ್ನೆ ಪುತ್ರ ಈ ಮನೆಗೆ ತಲುಪಿದಾಗ ಕೃಷ್ಣ ಛಾವಡಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರಕ್ತ ಸೋರಿಕೆಯಾಗಿ ಸಾವು ಸಂಭವಿಸಿದೆ ಯೆಂದು ಅಂದಾಜಿಸಲಾಗಿದೆ. ವಿಷಯ ತಿಳಿದು ಬದಿಯಡ್ಕ ಪೊಲೀಸರು ತಲುಪಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಮೃತರು ತಾಯಿ ಅಕ್ಕು, ಪತ್ನಿ ಸರ ಸ್ವತಿ, ಮಕ್ಕಳಾದ ಕೃತಿ ಗುರು, ಕೃಶಾಂತ್ ಗುರು, ಕೃತಿಕ, ಕಾರ್ತಿಕ, ಸೊಸೆಯಂದಿ ರಾದ ಯಮುನ, ಸುಜಾತ, ಸಹೋ ದರ-ಸಹೋದರಿ ಯರಾದ ಸತೀಶ್, ಗಣೇಶ್ (ದೈವ ಕಲಾವಿದರು), ಪ್ರೇಮ, ಸುಂದರಿ, ಕಮಲ, ಲೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ನಾರಾಯಣ ಈ ಹಿಂದೆ ನಿಧನಹೊಂದಿದ್ದಾರೆ.