ಕಾಸರಗೋಡು ನಗರದಲ್ಲಿ ವಿದ್ಯುತ್ ಮೊಟಕು ಪರಿಹರಿಸಲು ಮರ್ಚೆಂಟ್ಸ್ ಅಸೋಸಿಯೇಶನ್ ಆಗ್ರಹ

ಕಾಸರಗೋಡು: ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಹೆಸರಲ್ಲಿ ಹಲವು ತಿಂಗಳುಗಳಿಂದ ಹಗಲು ಹೊತ್ತಿನಲ್ಲಿ ವಿದ್ಯುತ್ ವಿಚ್ಛೇದನ ನಡೆಸಲಾಗುತ್ತಿದ್ದು, ಇದು ಜನರ ಜೀವನ ದುಸ್ಸಾಹಗೊಳಿಸಿದೆ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಘಟಕ ದೂರಿದೆ.

ಕೆಎಸ್‌ಇಬಿಯ ಈ ಕ್ರಮ ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ಸಂದಿಗ್ಧತೆ ಸೃಷ್ಟಿಸುತ್ತಿದೆ. ಐಸ್‌ಕ್ರೀಂ, ಚಾಕಲೇಟ್ ಸಹಿತ ವಿವಿಧ ಆಹಾರ ಪದಾರ್ಥಗಳು ವಿದ್ಯುತ್ ಇಲ್ಲದ ಕಾರಣ ನಾಶವಾಗುತ್ತಿದ್ದು, ವ್ಯಾಪಾರಿಗಳಿಗೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ.

ಬಿಸಿ ಹೆಚ್ಚಾಗುತ್ತಿದ್ದು, ಉತ್ಸವ ಸೀಸನ್ ಆರಂಭಿಸಿರುವ ಸನ್ನಿವೇಶದಲ್ಲಿ ಅತ್ಯಂತ ತುರ್ತು ಪ್ರಾಮುಖ್ಯದೊಂದಿಗೆ ನಗರದ ದುರಸ್ತಿ ಕಾಮಗಾರಿಗಳನ್ನು ಪೂರ್ತಿಗೊಳಿಸಿ ತಡೆರಹಿತವಾಗಿ ವಿದ್ಯುತ್ ವಿತರಿಸಬೇಕೆಂದು ಮರ್ಚೆಂಟ್ಸ್ ಅಸೋಸಿಯೇಶನ್ ಕೆಎಸ್‌ಇಬಿ ಅಧಿಕಾರಿಗಳಲ್ಲಿ ಆಗ್ರಹಿಸಿದೆ.

RELATED NEWS

You cannot copy contents of this page