ಕುಂಬಳೆ ಮಖಾಂ ಉರೂಸ್ ಅಕ್ಟೋಬರ್ 24ರಿಂದ

ಕುಂಬಳೆ: ಕುಂಬಳೆ ಮಖಾಂ ಉರೂಸ್ ಅಕ್ಟೋಬರ್ 24ರಿಂದ ನವೆಂಬರ್ 2ರವರೆಗೆ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ ಎಂದು ಕುಂಬಳೆ ಬದರ್ ಜುಮಾ ಮಸೀದಿ ಯಲ್ಲಿ ನಡೆದ ಮಹಲ್ ಜಮಾಯತ್, ನೆರೆಯ ಜಮಾಯತ್‌ಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಕೆ.ಎಸ್. ಅಲಿ ತಂಙಳ್ ಕುಂಬೋಳ್, ಮುನಿರುಲ್ ಅಹ್ದಲ್ ತಂಙಳ್, ಯಾಹ್ಯಾ ತಂಙಳ್ ಆರಿಕ್ಕಾಡಿ, ಕುಂಬಳೆ ಖತೀಬ್ ಉಮರ್ ಹುದವಿ, ಜಮಾಯತ್ ಅಧ್ಯಕ್ಷ ಹಮೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಮಮ್ಮು ಹಾಜಿ, ಕೋಶಾಧಿಕಾರಿ ಅಬ್ದುಲ್ಲ ತಾಜ್, ಕೆ.ಎಂ. ಅಬ್ಬಾಸ್, ಹನೀಫ್ ಕುಂಟಂಗೇರಡ್ಕ, ಸಮೀರ್ ಕುಂಬಳೆ ಸಹಿತ ವಿವಿಧ ಮಹಲ್ ಪ್ರತಿನಿಧಿಗಳು ಭಾಗವಹಿಸಿದರು. ನೂತನ ಉರೂಸ್ ಸಮಿತಿಯನ್ನು ಆಯ್ಕೆ ಮಾಡಲಾಯಿತು.

You cannot copy contents of this page