ಮಂಜೇಶ್ವರ: ವಾಮಂಜೂರು ಚೆಕ್ಪೋಸ್ಟ್ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ತಡೆಯೊಡ್ಡಿದ ಎಸ್ಡಿಪಿಐ ಕಾರ್ಯಕರ್ತರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಅಕ್ಬರ್, ಬಿ.ಎಂ. ಮುಹಮ್ಮದ್, ಮುಹಮ್ಮದ್ ಇಕ್ಭಾಲ್, ಅಹಮ್ಮದ್ ಕಬೀರ್, ಅಬ್ದುಲ್ ನಾಸರ್, ಅಬ್ದುಲ್ ಸಲಾಂ, ಅನ್ವರ್ ಹುಸೈನ್, ತಾಜುದ್ದೀನ್, ಮುಹಮ್ಮದ್ ಶರೀಫ್, ಅಬ್ದುಲ್ ರಜಾಕ್ ಎಂಬೀ ಕಾರ್ಯಕರ್ತರು ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ೩೦ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಪೊಲೀಸರ ನಿರ್ದೇಶವನ್ನು ಅವಗಣಿಸಿ ಸಾರಿಗೆ ಅಡಚಣೆ ಸೃಷ್ಟಿಸಿ, ಧ್ವನಿವರ್ಧಕ ಬಳಸಿ ಘೋಷಣೆ ಮೊಳಗಿಸಿದುದಕ್ಕೆ ಕೇಸು ದಾಖಲಿಸಲಾಗಿದೆ. ಎಸ್ಡಿಪಿಐ ಮಂಜೇಶ್ವರ ಮಂಡಲ ಕಮಿಟಿ ನೇತೃತ್ವದಲ್ಲಿ ಮಂಗಳವಾರ ಸಂಜೆ ರಸ್ತೆತಡೆ ಚಳವಳಿ ನಡೆಸಲಾಗಿತ್ತು. ವಾಹನ ಅಪಘಾತದಲ್ಲಿ ಮೂರು ಮಂದಿ ಸಾವಿಗೀಡಾಗಲು ಕಾರಣ ಅವೈಜ್ಞಾನಿಕ ರಸ್ತೆ ನಿರ್ಮಾಣವೇ ಆಗಿದೆಯೆಂದು ಆರೋಪಿಸಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಅಡಚಣೆ ಸೃಷ್ಟಿಸಿ ಚಳವಳಿ ನಡೆಸಿದರು.