ಅನಂತಪುರ ಕೈಗಾರಿಕಾ ಕೇಂದ್ರದಲ್ಲಿ ನೀರಿನ ಕ್ಷಾಮ ಚೆಕ್‌ಡ್ಯಾಂ ನಿರ್ಮಾಣ ಪರಿಗಣನೆಯಲ್ಲಿ- ಜಿಲ್ಲಾಧಿಕಾರಿ

ಕುಂಬಳೆ: ಅನಂತಪುರ ಕೈಗಾರಿಕಾ ಕೇಂದ್ರದಲ್ಲಿ ನೀರಿನ ಕ್ಷಾಮವನ್ನು ಪರಿಹರಿಸಲು ಸಮೀಪದ ಜಲಮೂಲಗಳಲ್ಲಿ ಚೆಕ್ ಡ್ಯಾಂ ನಿರ್ಮಿಸುವುದು ಪರಿಗಣನೆಯಲ್ಲಿದೆ ಎಂದು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ತಿಳಿಸಿದರು. ನಮ್ಮ ಕಾಸರಗೋಡು ಮುಖಾಮುಖಿ ಕಾರ್ಯಕ್ರಮದಲ್ಲಿ  ಕೈಗಾರಿಕಾ ಪ್ರಾಂಗಣದ ಅಸೋಸಿಯೇಶನ್ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಮಾತನಾಡುತ್ತಿದ್ದರು. ಎಸ್ಟೇಟ್‌ನ ಜಲ ದೌರ್ಲಭ್ಯವನ್ನು ಪರಿಹರಿಸುವುದಕ್ಕಾಗಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಇರಿಗೇಷನ್ ಇಲಾಖೆಯೊಂದಿಗೆ ಮಾತುಕತೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಈ ತಿಂಗಳ ೧೩ರಂದು ವಿವಿಧ ಕೈಗಾರಿಕಾ ಕೇಂದ್ರಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ನೀರಾವರಿ, ಕೆಎಸ್‌ಇಬಿ, ಜಿಲ್ಲಾ ಪಂಚಾಯತ್, ಕಾಞಂಗಾಡ್ ನಗರಸಭೆ, ಮಡಿಕೈ ಪಂಚಾಯತ್ ಕಾರ್ಯದರ್ಶಿ ಎಂಬಿವರೊಂದಿಗೆ ಸಭೆ ನಡೆಸಲಾಗುವುದು. ಸುತ್ತು ಆವರಣಗೋಡೆ ನಿರ್ಮಾಣಕ್ಕೆ ಸಂಬಂಧಿಸಿ ಸರಕಾರಕ್ಕೆ ಪತ್ರ ಬರೆಯಲಾಗುವುದು. ವೋಲ್ಟೇಜ್ ಕ್ಷಾಮ ಪರಿಹಾರಕ್ಕೆ ಕೆಎಸ್‌ಇಬಿಯೊಂದಿಗೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ನುಡಿದರು. ಜಿಲ್ಲೆಯಲ್ಲಿ ಪ್ರಸ್ತುತ ಇರುವ ಹಾಗೂ ಮುಂದೆ ಸ್ಥಾಪಿಸುವ ಕೈಗಾರಿಕಾ ಎಸ್ಟೇಟ್‌ಗಳ ಇಂಧನ ಬೇಡಿಕೆ ಸಂಬಂಧಿಸಿ ಎಸ್ಟಿಮೇಟ್ ಸಿದ್ಧಪಡಿಸಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲಾಧಿಕಾರಿಯ ಈ ನಿಲುವನ್ನು ಕೈಗಾರಿಕಾ  ಕೇಂದ್ರದ ಉದ್ಯಮಿಗಳು  ಅಭಿನಂದಿಸಿದರು. ಸಭೆಯಲ್ಲಿ ಕೈಗಾರಿಕಾ ಕೇಂದ್ರದ ಜನರಲ್ ಮೆನೇಜರ್ ಕೆ. ಸಜಿತ್ ಕುಮಾರ್ ಸ್ವಾಗತಿಸಿದರು. ರತ್ನಾಕರನ್ ಮಾವಿಲ, ಕೆ.ಕೆ. ಇಬ್ರಾಹಿಂ, ವಿ. ತಂಬಾನ್, ಟಿ.ಎ. ಅಸ್ಲಾಂ, ಬಿ.ಎನ್. ರಘು, ರಾಜೇಶ್ ಕುಮಾರ್, ಕೆ. ವರ್ಷಿತ್, ಅಬ್ದುಲ್ ಹಾರೀಸ್, ಅಹಮ್ಮದ್ ಅಲಿ, ಶಂಸೀರ್ ಅಲಿ, ಬದ್ರುದ್ದೀನ್ ಭಾಗವಹಿಸಿದರು.

You cannot copy contents of this page