ಟ್ಯೂಷನ್‌ಗೆ ತೆರಳಲು ಉದಾಸೀನ: ಅಡಗಿ ಕುಳಿತು ಮನೆಮಂದಿಗೆ ಆತಂಕ ಸೃಷ್ಟಿಸಿದ 1ನೇ ತರಗತಿ ಬಾಲಕ

ತಿರುವನಂತಪುರ: ಟ್ಯೂಷನ್‌ಗೆ ತೆರಳಲು ಮನೆ ಮಂದಿ ಒತ್ತಾಯಪಡಿಸಿದ ಹಿನ್ನೆಲೆಯಲ್ಲಿ ಮಗು ಅಡಗಿ ಕುಳಿತು ಮನೆಮಂದಿಗೆ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ವೆಂಗನೂರು ನೀಲಕೇಶಿ ನಿವಾಸಿ 1ನೇ ತರಗತಿ ವಿದ್ಯಾರ್ಥಿ ಗಂಟೆಗಳ ಕಾಲ ಅಡಗಿ ಕುಳಿತು ಮನೆಮಂದಿಯನ್ನು ಆತಂಕಕ್ಕೀಡುಮಾಡಿದ್ದನು.

ನಿನ್ನೆ ಸಂಜೆ ಈ ಘಟನೆ ನಡೆದಿದೆ. ಸಂಜೆ ಶಾಲೆಯಿಂದ ಬಂದ ಬಳಿಕ ಆಟವಾಡುತ್ತಿದ್ದ ಮಧ್ಯೆ ಮಗು ನಾಪತ್ತೆಯಾದ ಬಗ್ಗೆ ತಿಳಿದು ಬಂದಿದೆ. ಸ್ಥಳೀಯರೆಲ್ಲರೂ ಸೇರಿ ಹುಡುಕಾಟ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಲೆ ಪೊಲೀಸರು ತಲುಪಿ ಹುಡುಕಾಟ ಆರಂಭಿಸಿದರು. ಕೊನೆಯದಾಗಿ ಮನೆಯೊಳಗೆ ಹುಡುಕಾಟ ನಡೆಸುತ್ತಿರುವಾಗ ಸ್ನಾನದ ಕೊಠಡಿಯಲ್ಲಿ ಹುಡುಗ ಅಡಗಿ ಕುಳಿತಿದ್ದುದು ಕಂಡು ಬಂದಿದೆ. ಟ್ಯೂಷನ್‌ಗೆ ತೆರಳಲು ಒತ್ತಾಯಿಸಿರುವುದೇ ಬಾಲಕ ಅಡಗಿ ಕುಳಿತುಕೊಳ್ಳಲು ಕಾರಣವೆನ್ನಲಾಗಿದೆ.

You cannot copy contents of this page