ನಾಪತ್ತೆಯಾದ 13ರ ಬಾಲಕಿ ಸಂಬಂಧಿಕನ ಜೊತೆ ಬೆಂಗಳೂರಿನಲ್ಲಿ ಪತ್ತೆ

ಕಲ್ಲಿಕೋಟೆ: ತಾಮರಶ್ಶೇರಿ ಪೆರುಂಬಳ್ಳಿಯಿಂದ ನಾಪತ್ತೆಯಾಗಿದ್ದ 13ರ ಹರೆಯದ ಬಾಲಕಿಯನ್ನು ಪತ್ತೆಹಚ್ಚಲಾಗಿದೆ. ಸಂಬಂಧಿಕನಾದ ಯುವಕನ ಜೊತೆ ಬೆಂಗಳೂರಿನಿಂದ ಬಾಲಕಿಯ ಪತ್ತೆಹಚ್ಚಲಾಗಿದೆ. ಈ ತಿಂಗಳ 11ರಂದು ಬೆಳಿಗ್ಗೆ ೮ನೇ ತರಗತಿ ವಿದ್ಯಾರ್ಥಿನಿಯಾದ ಬಾಲಕಿ ನಾಪತ್ತೆಯಾಗಿದ್ದಳು. ಈಕೆ ಓರ್ವ ಯುವಕನ ಜೊತೆ ಬೆಂಗಳೂರಿ ನಲ್ಲಿದ್ದಾಳೆಂಬ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಬಳಿಕ ನಡೆಸಿದ ತನಿಖೆಯಲ್ಲಿ ಕರ್ನಾಟಕ ಪೊಲೀಸರು ತಾಮರಶ್ಶೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಾಲಕಿಯನ್ನು ಕರೆತರಲು ತಾಮರಶ್ಶೇರಿ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page