ಮಸೀದಿ ಇಮಾಂರ 32,000 ರೂ. ಕಳವು: ತನಿಖೆ ತೀವ್ರ

ಕುಂಬಳೆ: ಮೊಗ್ರಾಲ್ ಕಡಪ್ಪುರ ಖಿಳರ್ ಮಸೀದಿಯ ಇಮಾಂರ 32,000 ರೂಪಾಯಿ ಕಳವಿಗೀಡಾ ದ ಪ್ರಕರಣದಲ್ಲಿ ಕುಂಬಳೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕರ್ನಾಟಕದ ಬಂಟ್ವಾಳ ಮಂಜನಾಡಿಯ ಸಾಹಿದ್ ಎಂಬವರ ಹಣ ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಶುಕ್ರವಾರದಂದು ಮಹಲ್ಲ್ ನಿವಾಸಿಗಳಿಂದ ಹಣ ಸಂಗ್ರಹಿಸಲು ಹೋದ ಸಂದರ್ಭದಲ್ಲಿ  ಕಳವು ನಡೆದಿದೆ.

 ಕಪಾಟು ಬೀಗ ಮುರಿದು ಹಣ ಕಳವು ನಡೆಸಲಾಗಿದೆ. ಮೂರು ವರ್ಷಗಳಿಂದ ಕಡಪ್ಪುರ ಖಿಳರ್ ಮಸೀದಿಯಲ್ಲಿ ಇಮಾಂ ಆಗಿ ಕೆಲಸ ನಿರ್ವಹಿಸುತ್ತಿರುವ ಸಾಹಿದ್ ಮೊಗ್ರಾ ಲ್ ಮದ್ರಸದಲ್ಲಿ  ಅಧ್ಯಾಪಕನಾ ಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಇಮಾಂರ ಮೊಬೈಲ್ ಫೋನ್  ಕಳವಿಗೀಡಾಗಿದ್ದರೂ ಬಳಿಕ ಅದು ಮರಳಿ ಲಭಿಸಿತ್ತು.

You cannot copy contents of this page