ಮಹಾದ್ವಾರ ನಾಳೆ ಲೋಕಾರ್ಪಣೆ 

ಮಧೂರು  ಕ್ಷೇತ್ರ ಕಳೆಯನ್ನು ಇಮ್ಮಡಿಗೊಳಿಸುವ ಮಹಾದ್ವಾರ ರಾಜಗೋಪುರ ಹಾಗೂ  ರಾಜಾಂಗಣದ ಉದ್ಘಾಟನೆ ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಸುಮಾರು ಒಂದೂವರೆ ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತ ವ್ಯಯಿಸಿ ಮುಂಬೈ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರು  ಕೊಡುಗೆಯಾಗಿ ನೀಡಿದ ದ್ರಾವಿಡ ಶೈಲಿಯ ಮಹಾದ್ವಾರವನ್ನು ಕೇಂದ್ರ ಸಚಿವ ಸುರೇಶ್‌ಗೋಪಿ ಲೋಕಾರ್ಪಣೆಗೊಳಿಸುವರು.  ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವಾ ಸಮಿತಿ ಅಧ್ಯಕ್ಷ ಡಾ| ಬಿ.ಎಸ್. ರಾವ್ ಅಧ್ಯಕ್ಷತೆ ವಹಿಸುವರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರುಶ್ರೀ  ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ನಾಡೋಜ ಜಿ. ಶಂಕರ್ ಉಡುಪಿ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಕೆ.ಕೆ. ಶೆಟ್ಟಿ ಕುತ್ತಿಕ್ಕಾರ್ ಕನ್ಯಾನ, ರಘುರಾಮ ಶೆಟ್ಟಿ, ಬಿ.ಕೆ. ಮಧೂರು ಮುಂಬೈ, ಖ್ಯಾತ ಭಾಗವತ ಸತೀಶ್ ಶೆಟ್ಟಿ ಪಟ್ಲ, ದಯಾಸಾಗರ ಚೌಟ ಮುಂಬೈ, ಡಾ. ಮಮತಾ ಶೆಟ್ಟಿ, ಪುರುಷೋತ್ತಮ ಭಂಡಾರಿ ಮೊದಲಾದವರು ಭಾಗವಹಿಸುವರು

You cannot copy contents of this page