ಮನೆ ಮುಂದೆಯೇ ಸಾಕು ನಾಯಿಯನ್ನು ಕೊಂದು ತಿಂದ ಚಿರತೆ

ಕಾಸರಗೋಡು: ಜಿಲ್ಲೆಯಲ್ಲಿ ಚಿರತೆ ಭೀತಿ ಇನ್ನೂ ದೂರವಾಗಿಲ್ಲ. ಎರಡು ಚಿರತೆಗಳನ್ನು ಸೆರೆಹಿಡಿದು ಸಾಗಿಸಿದ ಬೆನ್ನಲ್ಲೇ, ಅಂಬಲತರಕ್ಕೆ ಸಮೀಪದ ಪರಕಳಾಯಿ ಕಲ್ಲಡ ಚಿಟ್ಟದ ವಿಕಾಸ್ ಎಂಬವರ ಮನೆ ಅಂಗಳಕ್ಕೆ ಪ್ರವೇಶಿಸಿದ ಚಿರತೆಯೊಂದು ಸಾಕು ನಾಯಿಯನ್ನು ಕೊಂದು ತಿಂದಿದೆ. ರಾತ್ರಿ ಸುಮಾರು 11 ಗಂಟೆ ವೇಳೆ ಚಿರತೆ ಮನೆ ಅಂಗಳದಲ್ಲಿರುವ ನಾಯಿಯನ್ನು  ಕೂಡಿ ಹಾಕಿದ ಗೂಡಿನತ್ತ ಸಾಗುತ್ತಿರುವ  ದೃಶ್ಯ ಪರಿಸರದ ಸಿಸಿ ಟಿವಿ ಕ್ಯಾಮರಾದಲ್ಲಿ ಗೋಚರಿಸಿದೆ. ಇದನ್ನು ಪರಿಶೀಲಿಸಿದ ಅರಣ್ಯಪಾಲಕರು ಕ್ಯಾಮರಾದಲ್ಲಿ  ಪತ್ತೆಯಾಗಿರುವುದು ಚಿರತೆಯ ದೃಶ್ಯವೆಂದು ಸ್ಪಷ್ಟಪಡಿಸಿದ್ದಾರೆ. ಚಿರತೆ ಕೊಂದು ತಿಂದ ನಾಯಿಯ ಅವಶೇಷಗಳು ಅಲ್ಲಿ ಪತ್ತೆಯಾಗಿದೆ.

You cannot copy contents of this page