ಮದ್ಯದಮಲಿನಲ್ಲಿ ಕರ್ತವ್ಯಕ್ಕೆ ಹಾಜರಾದ ರೈಲ್ವೇ ಸ್ಟೇಷನ್ ಮಾಸ್ತರ್ ವಿರುದ್ಧ ಕೇಸು

ಮದ್ಯದಮಲಿನಲ್ಲಿ ಕರ್ತವ್ಯಕ್ಕೆ ಹಾಜರಾದ ರೈಲ್ವೇ ಸ್ಟೇಷನ್ ಮಾಸ್ತರ್ ವಿರುದ್ಧ ಕೇಸು

ಕಾಸರಗೋಡು: ಮದ್ಯದ ಅಮಲಿ ನಲ್ಲಿ ಕರ್ತವ್ಯಕ್ಕೆ ಹಾಜರಾದ ನೀಲೇಶ್ವರ ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ತರ್‌ರ ವಿರುದ್ಧ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ರಾಜಸ್ತಾನ ನಿವಾಸಿ ಘನ್ ಶ್ಯಾಮ್ ಮಹವಾ (36)ರ ವಿರುದ್ಧ ರೈಲ್ವೇ ಆಕ್ಟ್ ಪ್ರಕಾರ ಈ ಪ್ರಕರಣ ದಾಖಲಿಸ ಲಾಗಿದೆ. ಇವರು ಶನಿವಾರದಂದು ಮದ್ಯದಮಲಿನಲ್ಲಿ ಕರ್ತವ್ಯಕ್ಕೆ ಹಾಜರಾ ಗಿದ್ದರು. ಅದನ್ನು ಗಮನಿಸಿದ ಆರ್‌ಪಿಎ ಫ್‌ನ ಎಸ್‌ಐ ಕದಿರೇಶ್ ಬಾಬು ನೇತೃ ತ್ವದ ಪೊಲೀಸರು ಹಾಗೂ ನೀಲೇಶ್ವರ ಪೊಲೀ ಸರು ವಶಕ್ಕೆ ತೆಗೆದು ವೈದ್ಯಕೀಯ ತಪಾಸಣೆ ಗೊಳ ಪಡಿಸಿದಾಗ ಅವರು ಮದ್ಯದಮಲಿ ನಲ್ಲಿರುವುದು ಸ್ಪಷ್ಟಗೊಂಡಿದೆ ಎಂದು ಅದರ ಆಧಾರದಲ್ಲಿ ಅವರ ವಿರುದ್ಧ ಕೇಸು ದಾಖಲಿ ಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page