ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಅಭಿವೃದ್ಧಿ ಆಗ್ರಹಿಸಿ ಕಾಂಗ್ರೆಸ್‌ನಿಂದ ಪ್ರತಿಭಟನಾ ಧರಣಿ

ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಕಾಲ ಚಿಕಿತ್ಸೆ ಮತ್ತೆ ಆರಂಭಿಸಬೇಕು, ಎಲ್ಲಾ ಜೌಷಧಿಗಳನ್ನು ನೀಡಬೇಕು, ವೈದ್ಯರ ಕ್ಷಾಮವನ್ನು ನೀಗಿಸಬೇಕು ವೆÆದ ಲಾದ ಹಲವಾರು ಬೇಡಿಕೆಯನ್ನು ಮುಂದಿಟ್ಟು ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಪ್ರತಿಭಟನಾ ಧರಣಿ ನಿನ್ನೆ ನಡೆಯಿತು. ಡಿ.ಸಿ.ಸಿ ಜನರಲ್ ಕಾರ್ಯದರ್ಶಿ ಜೆ.ಎಸ್ ಸೋಮಶೇಖರ ಉದ್ಘಾಟಿಸಿದರು. ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ನೇತಾರರಾದ ಬಿ.ಎಂ ಖÁದರ್ ಹಾಜಿ, ಮೊಹಮ್ಮದ್ ಸೀಗಂದಡಿ, ಫಾರೂಕ್, ನೆಬಿನ್ ನಯÁಬಜಾರ್, ಜಾಬಿದ್ ಮುಟ್ಟಂ, ಬಶೀರ್ ಹೇರೂರು, ಇಸ್ಮಾಯಿಲ್ ಮಣ್ಣಂಗುಳಿ, ಬಾಬು ಇಚ್ಲಂಗೋಡು, ಹನೀಫ್, ಇಬ್ರಾಹಿಂ ಮುಟ್ಟಂ, ರೀಯಾಜ್ ಮುಟ್ಟಂ ಮೊದಲಾದವರು ಮಾತನಾಡಿದರು. ಮೊಯಿನ್ ಪೂನಾ ಸ್ವಾಗತಿಸಿ, ಅಶ್ರಫ್ ಮುಟ್ಟಂ ವಂದಿಸಿದರು. ಬೇಡಿಕೆಯ ಮನವಿಯನ್ನು ಮೇಲಾಧಿಕಾರಿಗಳಿಗೆ, ಆರೋಗ್ಯ ಸಚಿವÉ ಹಾಗೂ ಇತರ ಅಧಿಕಾರಿಗಳಿಗೆ ನೀಡಲಾಯಿತು.

You cannot copy contents of this page