ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ವ್ಯಾಪಾರಿಗೆ ಕಣಜದ ಹುಳುಗಳ ದಾಳಿ: ಅಗ್ನಿಶಾಮಕ ದಳದಿಂದ ರಕ್ಷಣೆ

ಉಪ್ಪಳ: ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಾಪಾರಿಗೆ ಕಣಜದ ಹುಳಗಳು ದಾಳಿ ನಡೆಸಿದ ಘಟನೆ ನಡೆದಿದೆ. ಉಪ್ಪಳ ಸೋಂಕಾಲು ಕೊಡಂಗೆ ನಿವಾಸಿ ಅಬ್ಬಾಸ್ (39) ಎಂಬವರು ಕಣಜದ ಹುಳಗಳ ದಾಳಿಯಿಂದ ಗಾಯಗೊಂಡಿದ್ದಾರೆ. ಅಂಬಾರ್‌ನಲ್ಲಿ ಜೀನಸು ಅಂಗಡಿ ನಡೆಸುತ್ತಿರುವ ಅಬ್ಬಾಸ್ ನಿನ್ನೆ ಸಂಜೆ 5.30ರ ವೇಳೆ ಅಂಗಡಿಯಿಂದ ಕೊಡಂಗೆಯಲ್ಲಿರುವ ಮನೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಸ್ಕೂಟರ್ ಸೋಂಕಾಲ್‌ಗೆ ತಲುಪಿದಾಗ ಎಲ್ಲಿಂದಲೋ ಹಾರಿ ಬಂದ ಕಣಜದ ಹುಳುಗಳು ಮುತ್ತಿಗೆ ಹಾಕಿ ಕಡಿದಿವೆ ಎಂದು ಅಬ್ಬಾಸ್ ತಿಳಿಸಿದ್ದಾರೆ.  ಕಣಜದ ಹುಳುಗಳ ದಾಳಿ ಬಗ್ಗೆ ಅಬ್ಬಾಸ್ ನೀಡಿದ ಮಾಹಿತಿಯಂತೆ ಉಪ್ಪಳದಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಅವರನ್ನು ರಕ್ಷಿಸಿದೆ. ಬಳಿಕ ಅಗ್ನಿಶಾಮಕ ದಳದ ವಾಹನದಲ್ಲಿ ಅಬ್ಬಾಸ್‌ರನ್ನು ಕೈಕಂಬದ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು.

You cannot copy contents of this page