ಗಾಂಜಾ ಪ್ರಕರಣ: 2 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡ ಆರೋಪಿ ಮತ್ತೆ ಸೆರೆ

ಕಾಸರಗೋಡು: ಗಾಂಜಾ ಪ್ರಕರಣದಲ್ಲಿ ಸೆರೆಗೀಡಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡ ಆರೋಪಿ ಮತ್ತೆ ಗಾಂಜಾ ಸಹಿತ ಸೆರೆಗೀಡಾಗಿದ್ದಾನೆ. ಪಡನ್ನ ಆಲಕ್ಕೋಲ್‌ನ ಟಿ.ಎಸ್. ರತೀಶ್ (52) ಎಂಬಾತನನ್ನು ಚಂದೇರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಪ್ರಶಾಂತ್ ಹಾಗೂ ತಂಡ ಬಂಧಿಸಿದೆ. ಈತನ ಕೈಯಿಂದ 180 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಗಾಂಜಾ ಪ್ರಕರಣಗಳಲ್ಲಿ ಆರೋಪಿಯಾದ ರತೀಕ್ ಎರಡು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದನು. ಬಳಿಕ ಈತನ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ಮೊನ್ನೆ ರಾತ್ರಿ ವಡಕ್ಕೇಪುರ ಎಂಬಲ್ಲಿಂದ ಈತನನ್ನು ಗಾಂಜಾ ಸಹಿತ ಬಂಧಿಸಲಾಗಿದೆ.

You cannot copy contents of this page