ಖ್ಯಾತ ಸೀರಿಯಲ್ ನಿರ್ದೇಶಕ ನಿಧನ
ತಿರುವನಂತಪುರ: ಖ್ಯಾತ ಸೀರಿಯಲ್ ನಿರ್ದೇಶಕ ಆದಿತ್ಯನ್ (೪೭) ನಿಧನಹೊಂದಿದರು. ಮನೆಯಲ್ಲಿ ಹೃದಯಾಘಾತವುಂ ಟಾದ ಇವರನ್ನು ಆಸ್ಪತ್ರೆಗೆ ತಲು ಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸಾಂತ್ವನಂ, ವಾನಂಬಾಡಿ, ಆಕಾಶ ದೂತ್ ಸಹಿತ ಪ್ರಸಿದ್ಧ ಸೀರಿಯಲ್ ಗಳನ್ನು ಇವರು ನಿರ್ದೇಶಿಸಿದ್ದಾರೆ. ಕೊಲ್ಲಂ ಅಂಜಲ್ ನಿವಾಸಿಯಾಗಿ ರುವ ಆದಿತ್ಯನ್ ಕೆಲವು ವರ್ಷಗಳಿಂದ ತಿರುವನಂತಪುರ ಪೇಯಾಡ್ ಎಂಬಲ್ಲಿ ವಾಸಿಸುತ್ತಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಭಾರತ್ ಭವನ್ನಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾ ಗುವುದು. ಮೃತದೇಹದ ಅಂತಿಮ ದರ್ಶನ ಪಡೆಯಲು ಸೀರಿಯಲ್, ಸಿನಿಮಾ ರಂಗದ ಹಲವರು ಪ್ರಮುಖ ರು ಆಸ್ಪತ್ರೆಗೆ ತಲುಪಿದ್ದಾರೆ.