ಹೊಸಂಗಡಿ ಪೇಟೆಯ ಸರ್ವೀಸ್ ರಸ್ತೆಯಲ್ಲಿ ಕಟ್ಟಿನಿಂತ ಮಳೆನೀರು: ವ್ಯಾಪಾರಿಗಳು, ಪಾದಚಾರಿಗಳಿಗೆ ಸಮಸ್ಯೆ

ಮಂಜೇಶ್ವರ: ನಿನ್ನೆ ಒಂದೇ ದಿನ ಸುರಿದ ಮಳೆಗೆ ಹೊಸಂಗಡಿ ಪೇಟೆಯ ತಲಪಾಡಿ ಭಾಗಕ್ಕೆ ತೆರಳುವ ಸರ್ವೀಸ್ ರಸ್ತೆಯಲ್ಲಿ ನೀರು ಸಂಗ್ರಹಗೊಂಡು ಕೆಸರು ಗದ್ದೆಯಾಗಿ ಮಾರ್ಪಾಡುಗೊಂಡಿದೆ. ಸ್ಥಳೀಯ ವ್ಯಾಪಾರಿಗಳು ಸಹಿತ ಪಾದಾಚಾರಿಗಳು ಸಮಸ್ಯೆಗೀಡಾಗಿದ್ದಾರೆ. ವ್ಯಾಪಾರ ಸಂಸ್ಥೆಯ ಎದುರುಗಡೆ ನೀರು ಕಟ್ಟಿ ನಿಲ್ಲಲು ಚರಂಡಿ ಸಮತಟ್ಟು ಇಲ್ಲದೆ ಇರುವುದು ಕಾರಣವೆನ್ನಲಾಗಿದೆ. ನೀರು ಸಂಗ್ರಹಗೊಂಡು ನಡೆದಾಡಲು ಅಸಾದ್ಯವಾಗಿತ್ತು. ಇಲ್ಲಿ ಸಮತಟ್ಟುಗೊಳಿಸಲು ವ್ಯಾಪಾರಿಗಳು ಈ ಹಿಂದೆ ಆಗ್ರಹಿಸಿದ್ದರು. ಆದರೆ ಯಾವುದೇ ಕ್ರಮಕೈಗೊಳ್ಳದೇ ಇರುವುದು ಸ್ಥಳೀಯರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಮಳೆಗಾಲ ಪ್ರಾರಂಭಗೊಳ್ಳುವ ಮುನ್ನವೇ ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

You cannot copy contents of this page