ಅಬಕಾರಿ ದಾಳಿ: ಗಾಂಜಾ, ಕರ್ನಾಟಕ ಮದ್ಯ ವಶ: ಇಬ್ಬರ ಸೆರೆ
ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಹಾಗೂ ಕರ್ನಾಟಕ ನಿರ್ಮಿ ತ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಸೆರೆಹಿಡಿದು ಕೇಸು ದಾಖಲಿಸಲಾಗಿದೆ.
ಬಾಡೂರು ಮಂಗಲಡ್ಕದಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಪ್ರಮೋದ್ ಕುಮಾರ್ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 16 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಂಗಲಡ್ಕದ ಹಸೀಬ್ (29) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಗ್ರೇಡ್ ಎಇಐ ಸಿಕೆವಿ ಸುರೇಶ್, ಗ್ರೇಡ್ ಪ್ರಿವೆಂಟೀವ್ ಆಫೀಸರ್ ನೌಶಾದ್ ಕೆ, ಪ್ರಜಿತ್ ಕುಮಾರ್ ಕೆ.ಆರ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶಿಜಿತ್ ವಿ.ವಿ, ಸೋನು ಸೆಬಾಸ್ಟಿನ್, ರೀನಾ ವಿ ಮತ್ತು ಚಾಲಕ ಸಜೀಶ್ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.
ಇದೇ ರೀತಿ ಬದಿಯಡ್ಕ ಎಕ್ಸೈಸ್ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಕೆ. ಮೊಹಮ್ಮದ್ ಕಬೀರ್ ಬಿ.ಎಸ್ ನೇತೃತ್ವದ್ದ ತಂಡ ನಿನ್ನೆ ಆದೂರು ಅಬಕಾರಿ ತಪಾಸಣಾ ಕೇಂದ್ರ ಬಳಿ ನಡೆಸಿದ ಶೋಧದಲ್ಲಿ ಅಲ್ಲೇ ಪಕ್ಕ ಬಚ್ಚಿಡಲಾಗಿದ್ದ 2.250 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಲಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ. ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಜೋನ್ಸನ್ ಪೋಲ್, ಲಿಜಿನ್ ಆರ್, ರಿಫ್‌ಸನ್ಸ್ ಟಿ.ಜೆ ಮತ್ತು ಶಾಲಿನಿ ವಿ ಎಂಬವರು ಈ ಕಾರ್ಯಾ ಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು. ಇನ್ನೊಂದೆಡೆ ಅಬಕಾರಿ ಎಕ್ಸೈಸ್ ಇನ್‌ಸ್ಪೆಕ್ಟರ್ ಗಳಾದ ಜೋಸೆಫ್ ಜೆ ನೇತೃತ್ವದ ತಂಡ ಹೊಸದುರ್ಗ ಮುಂಡತ್ತೋಡಿನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಲೀಟರ್ ಕರ್ನಾಟಕ ಮದ್ಯ ಸಹಿತ ಮುಂಡತ್ತೋ ಡಿನ ಅಶೋಕನ್ ಕೆ ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದೆ.