ಪಾನ್‌ಮಸಾಲೆ ಸಹಿತ ಓರ್ವ ಸೆರೆ

ಉಪ್ಪಳ: ಪಾನ್ ಮಸಾಲೆ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಜೀರ್‌ಪಳ್ಳ ಧರ್ಮನಗರದ ಉಮ್ಮರ್ ಫಾರೂಕ್ ಕಲ್ಲೂರು (39) ಎಂಬಾತನನ್ನು ಬಂಧಿಸಲಾಗಿದೆ.  ನಿನ್ನೆ ರಾತ್ರಿ 7.30ಕ್ಕೆ ಮಂಜೇಶ್ವರ ಎಸ್‌ಐ ರತೀಶ್ ನೇತೃತ್ವದ ಪೊಲೀಸರು ಮಜೀರ್‌ಪಳ್ಳ ಬಸ್ ನಿಲ್ದಾಣ ಬಳಿ ಗಸ್ತು ತಿರುಗುತ್ತಿದ್ದಾಗ ಉಮ್ಮರ್ ಫಾರೂಕ್ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದಿದ್ದನು. ಆತನ ಕೈಯಲ್ಲಿದ್ದ ಚೀಲವನ್ನು ಪರಿಶೀಲಿಸಿದಾಗ ೪೮ ಪ್ಯಾಕೆಟ್ ಪಾನ್‌ಮಸಾಲೆ ಪತ್ತೆಯಾಗಿದೆ.

RELATED NEWS

You cannot copy contents of this page