ವ್ಯಾಪಕಗೊಂಡ ಗಾಳಿ, ಮಳೆ ಪ್ರತಾಪನಗರ ಸಹಿತ ವಿವಿಧ ಪ್ರದೇಶಗಳಲ್ಲಿ ಮರ ಮುರಿದು ವಿದ್ಯುತ್ ಕಂಬ ಹಾನಿ

ಉಪ್ಪಳ: ಗಾಳಿ, ಮಳೆ ವ್ಯಾಪಕ ಗೊಂಡ ಹಿನ್ನೆಲೆಯಲ್ಲಿ ಪ್ರತಾಪನಗರ ಸಹಿತ ವಿವಿಧ ಪ್ರದೇಶಗಳಲ್ಲಿ ಮರಗಳು ಮುರಿದು ವಿದ್ಯುತ್ ಕಂಬ ಹಾನಿ ಗೊಂಡ ಘಟನೆ ನಡೆದಿದೆ. ಶನಿವಾರ ರಾತ್ರಿ ಭಾರೀ ಮಳೆ, ಗಾಳಿಗೆ ಪ್ರತಾಪ ನಗರದ ಗುಳಿಗ ಬನದ ಬಳಿಯ ರಸ್ತೆ ಯಲ್ಲಿ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆ ತಡೆ ಉಂಟಾ ಗಿದೆ. ಮಂಗಲ್ಪಾಡಿ ಕೃಷ್ಣನಗರದಲ್ಲಿ ಮರ ತಂತಿಗೆ ಬಿದ್ದು ವಿದ್ಯುತ್ ಕಂಬ ಹಾನಿ ಗೊಂಡಿದೆ. ಜನ ಸಂಚಾರ ವಿರುವ ಪ್ರದೇಶವಾಗಿದ್ದು, ಸಂಭವಿಸಬಹು ದಾದ ಅಪಾಯ ತಪ್ಪಿದೆ. ಈ ಎರಡು ಕಡೆಯಲ್ಲಿ ಅಲ್ಪ ಹೊತ್ತು ರಸ್ತೆಯಲ್ಲಿ ಸಂಚಾರ ಮೊಟಕುಗೊಂಡಿದೆ. ಊರ ವರು ಹಾಗೂ ವಿದ್ಯುತ್ ಇಲಾಖೆ ಸಿಬ್ಬಂದಿ ಗಳು ಸೇರಿ ನಡೆಸಿದ ಕಾರ್ಯಾಚರಣೆಯಲ್ಲಿ ಸಂಚಾರ ಪುನರಾರಂಭಗೊAಡಿದೆ. ಅಲ್ಲದೆ ಪೆರಿಂಗಡಿ ಸಮುದ್ರ ತೀರದಲ್ಲಿ ಗಾಳಿ ಮರ ಮುರಿದು ಬಿದ್ದು ವಿದ್ಯುತ್ ಕಂಬ ಹಾನಿಗೊಂಡಿದೆ.

You cannot copy contents of this page