ಕಾಸರಗೋಡು: ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಸಂಘದ ಸದಸ್ಯರ ಮಕ್ಕಳಾದ ವಿದ್ಯಾರ್ಥಿ ಗಳಿಗೆ ಕಲಿಕಾ ಸಾಮಗ್ರಿ ವಿತರಣೆ ಈ ತಿಂಗಳ 31ರಂದು ಬೆಳಿಗ್ಗೆ 11.30೦ಕ್ಕೆ ಸೀತಾಂಗೋಳಿ ಸಂತೋಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಕಚೇರಿ ಪರಿಸರದಲ್ಲಿ ನಡೆಯಲಿದೆ. ಪ್ರಾಥಮಿಕ ವಿಭಾಗ, ಪ್ರೌಢ ವಿಭಾಗ, ಪದವಿ ವಿಭಾಗ ಎಂಬ ಮೂರು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಗುತ್ತಿದೆ ಎಂದು ಸಂಬಂಧ ಪಟ್ಟವರು ತಿಳಿಸಿದ್ದು, ಸಂಘದ ಸದಸ್ಯರು ಭಾಗವಹಿಸ ಬೇಕೆಂದು ವಿನಂತಿಸಿದ್ದಾರೆ.







