ರಸ್ತೆಗೆ ಗುಡ್ಡೆ ಕುಸಿದು ಅಪಾಯಭೀತಿ: ಅಂಗಡಿಮೊಗರಿನಲ್ಲಿ ನಾಗರಿಕರಿಂದ ಪ್ರತಿಭಟನೆ

ಪುತ್ತಿಗೆ: ರಸ್ತೆಗೆ ಗುಡ್ಡೆ ಕುಸಿದು ಅಪಾಯಭೀತಿ ಸೃಷ್ಟಿಸುತ್ತಿದ್ದರೂ ಅದಕ್ಕೆ ಪರಿಹಾರ ಕಾಣದ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ನಾಗರಿಕರು ರಸ್ತೆ ತಡೆ ಚಳವಳಿ ನಡೆಸಿದರು. ಅಂಗಡಿಮೊಗರಿನಲ್ಲಿ ನಿನ್ನೆ ನಾಗರಿಕರು ಅರ್ಧ ಗಂಟೆ ಕಾಲ ಪ್ರತಿಭಟನೆ ನಡೆಸಿದ್ದು, ಬಳಿಕ ಪೊಲೀಸರು ತಲುಪಿ ಚರ್ಚೆ ನಡೆಸಿದ ಬಳಿಕ ಪ್ರತಿಭಟನೆ ಕೊನೆ ಗೊಳಿಸಲಾಯಿತು. ಪೆರ್ಲ- ಅಂಗಡಿಮೊಗರು ರಸ್ತೆಯಲ್ಲಿ ಅಂಗಡಿಮೊಗರು ಶಾಲೆ ಸಮೀಪ ರಸ್ತೆಗೆ ಗುಡ್ಡೆ ಕುಸಿದು ಅಪಾಯಭೀತಿ ಎದುರಾಗುತ್ತಿದೆ. ಕಳೆದ ವರ್ಷವೂ ಇಲ್ಲಿ ರಸ್ತೆಗೆ ಗುಡ್ಡೆ ಜರಿದು ಬಿದ್ದಿತ್ತು. ಈ ಬಗ್ಗೆ ಅಂದು ನಾಗರಿಕರು ದೂರು ನೀಡಿದಾಗ ಶೀಘ್ರ ಪರಿಹಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಉಂಟಾಗಿಲ್ಲ. ಇದೀಗ ಮತ್ತೆ ಗುಡ್ಡೆ ಕುಸಿಯತೊಡಗಿರುವುದು ನಾಗರಿಕರ ಪ್ರತಿಭಟನೆಗೆ ಕಾರಣವಾಗಿದೆ.

You cannot copy contents of this page