ಶಾಲಾ ವಾಹನಗಳ ಸುರಕ್ಷತೆ ತಪಾಸಣೆ: ವಿದ್ಯಾರ್ಥಿಗಳ ಪ್ರಯಾಣ ಸಮಸ್ಯೆ ಪರಿಹಾರಕ್ಕೆ ವಾಟ್ಸಪ್ ಗ್ರೂಪ್ ರೂಪೀಕರಣ

ಕಾಸರಗೋಡು: ಆಪರೇಷನ್ ಸುರಕ್ಷಾ ವಿದ್ಯಾರಂಭ ಯೋಜನೆ ಯಂತೆ ಜಿಲ್ಲೆಯ 537 ಶಾಲೆಗಳ ವಾಹನಗಳನ್ನು ಸುರಕ್ಷಾ ತಪಾಸಣೆ ನಡೆಸಲಾಯಿತು. 300 ವಾಹನಗಳಿಗೆ ಸ್ಟಿಕ್ಕರ್ ಲಗತ್ತಿಸಿ ಬಿಡಲಾಯಿತು. ಉಳಿದ ವಾಹನಗಳಿಗೆ ಇನ್ನಷ್ಟು ಸುರಕ್ಷಿತತೆ ಮಾಡಲು ನಿರ್ದೇಶ ನೀಡಲಾಯಿತು. ಕಾಸರಗೋಡು, ಮಂಜೇಶ್ವರ ತಾಲೂಕುಗಳ 500ಕ್ಕೂ ಅಧಿಕ ಶಾಲಾ ವಾಹನ ಚಾಲಕರಿಗೂ ಆಯಾರಿಗೂ ರಸ್ತೆ ಸುರಕ್ಷಿತತೆ ಬಗ್ಗೆ ತರಗತಿ ನಡೆಸಲಾಯಿತು. ಹೊಸದುರ್ಗ, ವೆಳ್ಳರಿಕುಂಡ್ ತಾಲೂಕು ವ್ಯಾಪ್ತಿಯ ಬಸ್ ಚಾಲಕರಿಗೆ, ಆಯಾರಿಗೆ ಇಂದು ತರಗತಿ ನೀಡಲಾಗುವುದು. ವಿದ್ಯಾರ್ಥಿಗಳ ಪ್ರಯಾಣ ಸಮಸ್ಯೆ ಸುಲಭದಲ್ಲಿ ಪರಿಹರಿಸುವುದಕ್ಕೆ ವಿವಿಧ ಇಲಾಖೆ ಅಧಿಕಾರಿಗಳ ವಾಟ್ಸಪ್ ಗ್ರೂಪ್ ರೂಪೀಕರಿಸಲಾಯಿತು. ಸಾರ್ವಜನಿಕರಿಗೆ ವಿದ್ಯಾರ್ಥಿಗಳ ಪ್ರಯಾಣಕ್ಕೆ ಸಂಬAಧಿಸಿದ ಸಮಸ್ಯೆಗಳನ್ನು 9188961914 ವಾಟ್ಸಪ್ ನಂಬ್ರಕ್ಕೆ ಸಂದೇಶವಾಗಿ ಕಳುಹಿಸಬಹುದಾಗಿದೆ. ಇದಕ್ಕೆ ಲಭಿಸಿದ ದೂರುಗಳ ಬಗ್ಗೆ ಮೋನಿಟರಿಂಗ್ ನಡೆಸುವುದಕ್ಕೆ ಮೋಟಾರು ವಾಹನ ಇಲಾಖೆಯ ಅಧಿಕಾರಿಗೆ ಹೊಣೆ ನೀಡಲಾಯಿತು. ಸಭೆಯಲ್ಲಿ ಎಂಡೋಸಲ್ಫಾನ್ ಸೆಲ್ ಡೆಪ್ಯೂಟಿ ಕಲೆಕ್ಟರ್ ಲಿಪು ಎಸ್. ಲಾರೆನ್ಸ್ ಅಧ್ಯಕ್ಷತೆ ವಹಿಸಿದರು. ಆರ್ಟಿಒ ಪ್ರತಿನಿಧಿ ಎಂ. ಸುಬ್ರಹ್ಮಣ್ಯನ್, ಪ್ರಾಂಶುಪಾಲ ಪಿ. ನಾರಾಯಣ ನಾಯ್ಕ್, ಕೆಎಸ್ಆರ್ಟಿಸಿ ಇನ್ಸ್ಪೆಕ್ಟರ್ ಆರ್. ಗೋಪ ಕುಮಾರ್, ಕಾಸರಗೋಡು ಸರಕಾರಿ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ರಿಚ್ಚು ಮ್ಯಾಥ್ಯು ಭಾಗವಹಿಸಿದರು.

RELATED NEWS

You cannot copy contents of this page