ರಾತ್ರಿ ಗಸ್ತು ನಡೆಸುತ್ತಿದ್ದ ಎಸ್‌ಐ.ಗೆ ಹಲ್ಲೆ: ಯುವಕ ಸೆರೆ

ಸೀತಾಂಗೋಳಿ: ರಾತ್ರಿ ಹೊತ್ತಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಎಸ್‌ಐಗೆ ಹಲ್ಲೆಗೈದ ಆರೋಪದಂತೆ ಯುವಕನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿ ದ್ದಾರೆ.  ಪುತ್ತಿಗೆ ನಿವಾಸಿ ಅಬ್ದುಲ್ ಬಾಸಿತ್ (೩೦) ಬಂಧಿತ ಆರೋಪಿ ಯಾಗಿದ್ದಾನೆ. ಬದಿಯಡ್ಕ ಎಸ್‌ಐ ಅನ್ಸಾರ್‌ಗೆ ನಿನ್ನೆ ರಾತ್ರಿ ಕಟ್ಟತ್ತಡ್ಕದಲ್ಲಿ ಹಲ್ಲೆಗೈದ ಪ್ರಕರಣ ನಡೆದಿತ್ತು. ಪೊಲೀಸರು ನಿನ್ನೆ ರಾತ್ರಿ ೧೨ ಗಂಟೆಗೆ ಕಟ್ಟತ್ತಡ್ಕಕ್ಕೆ ತಲುಪಿದಾಗ ಅಬ್ದುಲ್   ಬಾಸಿತ್ ನಿಂತಿರುವುದು ಕಂಡುಬಂ ದಿದೆ. ಯಾಕಾಗಿ ಇಲ್ಲಿ ನಿಂತಿರುವು ದೆಂದು ಆತನನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಆತ ಅಸಭ್ಯವಾಗಿ ಮಾತನಾಡಿ ಎಸ್‌ಐಯ ಕೈ ಹಿಡಿದು ತಿರುಚಿರುವುದಾಗಿ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಅಬ್ದುಲ್ ಬಾಸಿತ್‌ನನ್ನು ಕಸ್ಟಡಿಗೆ ತೆಗೆದ ಪೊಲೀಸರು ತಮ್ಮ ವಾಹನದಲ್ಲಿ ಹತ್ತಿಸಿ ಕುಂಬಳೆ ಪೊಲೀ ಸ್ ಠಾಣೆಗೆ ತಲುಪಿಸಿದ್ದಾರೆ. ಅನಂತರ ಎಸ್‌ಐಯ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page