ವಿವಿಧೆಡೆಗಳಲ್ಲಿ ತ್ಯಾಜ್ಯ ಉಪೇಕ್ಷಿಸಿದವರಿಂದ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ದಂಡ ವಸೂಲಿ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಯ ಅಧೀನದಲ್ಲಿರುವ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ವಿವಿಧ ಕಡೆಗಳಲ್ಲಿ ನಡೆಸಿದ ತಪಾ ಸಣೆಯಲ್ಲಿ ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಕಾನೂನು ಉಲ್ಲಂಘನೆ ಗಳನ್ನು ಪತ್ತೆಹಚ್ಚಿ ದಂಡ ವಿಧಿಸಿದೆ. ತ್ಯಾಜ್ಯಗಳನ್ನು ಉಪೇಕ್ಷಿಸುವ, ಉರಿಸುವ, ತೋಡಿಗೆಸೆಯುವ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೊಳವೆ ಬಾವಿಗಳು ಹೆಚ್ಚಾಗಿ ಉಪಯೋಗಿಸುತ್ತಿರುವ ಕಾರಣ ಪಾಳು ಬಾವಿಗಳಲ್ಲಿ ತ್ಯಾಜ್ಯವನ್ನು ಉಪೇಕ್ಷಿಸುತ್ತಿರುವುದು ಕಂಡು ಬರುತ್ತಿದೆ. ಬಾವಿಗಳಲ್ಲಿ ತ್ಯಾಜ್ಯ ಉಪೇಕ್ಷಿಸಿದ ಮುಳಿಯಾರಿನ ಕ್ವಾರ್ಟರ್ಸ್, ಚಟ್ಟಂಚಾಲ್‌ನ ಕ್ವಾರ್ಟರ್ಸ್, ಪೇರಾಲ್‌ನ ಕ್ವಾರ್ಟರ್ಸ್ ಎಂಬೆಡೆಗಳ ಲ್ಲಿನ ಮಾಲಕರಿಗೆ 11೦೦ ರೂ. ದಂಡ ಹೇರಲಾಗಿದೆ. ಅನಧಿಕೃತವಾಗಿ ಹಂದಿ ಸಾಕುವ ಕೇಂದ್ರ ಆರಂಭಿಸಿದ ಪರಿಸರದಲ್ಲಿ ಮಲಿನೀಕರಣಗೊಳಿಸಿ ರುವುದಕ್ಕೆ ಮಾನ್ಯದ ನಾರಾಯಣ ನಾಯ್ಕ್‌ರಿಗೆ 5೦೦೦ ರೂ. ದಂಡ ಹೇರಲಾಗಿದೆ. ಪ್ಲಾಸ್ಟಿಕ್ ಸಹಿತದ ತ್ಯಾಜ್ಯ ಗಳನ್ನು ರಾಶಿ ಹಾಕಿ ಉರಿಸಿದ ಹಿನ್ನೆಲೆ ಯಲ್ಲಿ ಮಾನ್ಯದ ಬೇಕರಿ, ಕುಂಜತ್ತೂರಿನ ಕಾಂಪ್ಲೆಕ್ಸ್, ಮೆಡಿಕಲ್ ಸೆಂಟರ್, ಕುಂಬಳೆಯ ಅಪಾರ್ಟ್‌ಮೆಂಟ್, ಸ್ಟೇಷನರಿ, ಸ್ಟೋರ್ ಎಂಬೆಡೆಗಳ ಮಾಲಕರಿಗೆ 22,500 ರೂ. ಹೇರಲಾ ಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿರ್ಲಕ್ಷ್ಯ ವಾಗಿ ಉಪೇಕ್ಷಿಸಿದ ಮಾನ್ಯದ ಜ್ಞಾನೋ ದಯ ಎಎಲ್‌ಪಿ ಶಾಲೆಯ ಮೆನೇಜರ್‌ರಿಗೆ 5೦೦೦ ರೂ. ದಂಡ ವಿಧಿಸಲಾಗಿದೆ.

ರಸ್ತೆ ಬದಿಯಲ್ಲಿ ತ್ಯಾಜ್ಯ ಉಪೇಕ್ಷಿಸಿದ ಮಂಜೇಶ್ವರ ಮಾಡದ ಮುರ್ಷಿತ ಹಾರಿಸ್‌ನಿಂದ ದಂಡ ವಸೂಲು ಮಾಡಲಾಗಿದೆ. ತಪಾಸಣೆ ಯಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಸೌಮ್ಯ ಪಿ.ವಿ, ಸಜಿತ ಎಂ, ಮೇಘ ಎಂ, ರಜನಿ ಕೆ, ಡೋಣ ಸೆಬಾಸ್ಟಿಯನ್, ಪ್ರಜೀಶ್ ಎಂ, ಫಾಸಿಲ್ ಇ.ಕೆ. ಭಾಗವಹಿಸಿದರು.

RELATED NEWS

You cannot copy contents of this page