ನಿವೃತ್ತ ಅಂಚೆ ನೌಕರ ನಿಧನ
ಕುಂಬಳೆ: ನಿವೃತ್ತ ಅಂಚೆ ನೌಕರ ಕಟ್ಟತ್ತಡ್ಕ ನೂತಗುರಿ ನಿವಾಸಿ ಬಾಬು ಬಂಗೇರ (74) ನಿನ್ನೆ ಸಂಜೆ ಹೃದಯಾಘಾತದಿಂದ ನಿಧನಹೊಂದಿದರು. ಅಂಚೆ ಪೇದೆಯಾಗಿ ಸೇವೆ ಆರಂಭಿಸಿದ ಇವರು ಕುಂಬಳೆ ಅಂಚೆ ಕಚೇರಿಯಲ್ಲಿ ಸಹಾಯಕ ನೌಕರನಾಗಿ ಭಡ್ತಿಗೊಂಡು ನಿವೃತ್ತರಾದರು.
ಮಯೂರ ಕಳತ್ತೂರು ಹಾಗೂ ಎಸ್ಕೆಎಸ್ಪುತ್ತಿಗೆ ಕ್ಲಬ್ಗಳ ಸ್ಥಾಪಿತ ಸದಸ್ಯರಾಗಿರುವ ಇವರು ನಾಟಕ ಕಲಾವಿದರಾಗಿ, ನಿರ್ದೇಶಕರಾಗಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಸುನಂದ, ಮಕ್ಕಳಾದ ವಿನಯ, ವಿಜಯ, ವಿನೋದ್, ಅಳಿಯಂದಿರಾದ ಪೂವಪ್ಪ, ದಾಮೋದರ, ಸಹೋದರಿಯರಾದ ಚಂದ್ರಾವತಿ, ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.