ಯುಡಿಎಫ್‌ಗೆ ಹೊಸ ಚೈತನ್ಯನೀಡಿದ ನಿಲಂಬೂರು ಚುನಾವಣೆ ಫಲಿತಾಂಶ

ತಿರುವನಂತಪುರ: ಮಲಪ್ಪುರಂ ಜಿಲ್ಲೆಯ ನಿಲಂಬೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವ ಣೆಯಲ್ಲಿ ನಿರೀಕ್ಷೆಗೂ ಮೀರಿದ ಬಹುಮತದ ಅಂತರದಲ್ಲಿ ಗೆದ್ದಿರುವುದು ಯುಡಿಎಫ್ಗೆ ಹೊಸ ಚೈತನ್ಯ ನೀಡಿದೆ. ಇದು ಮುಂದೆ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಯುಡಿಎಫ್ನ ಗೆಲುವಿನ ಮುನ್ನುಡಿಯಾಗಿದೆಯೆಂದು ಯುಡಿಎಫ್ ನೇತಾರರು ಅಭಿಪ್ರಾ ಯಪಡತೊಡಗಿದೆ.
ನಿಲಂಬೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,38,057 ಮತದಾರರಿದ್ದು, ಅದರಲ್ಲಿ 1,75,077 (ಶೇ. 75.87) ಮತದಾರರು ಮತ ಚಲಾಯಿಸಿದ್ದರು. ಇದರಲ್ಲಿ ಯುಡಿಎಫ್ (ಕಾಂಗ್ರೆಸ್) ನ ಆರಯಾ ದಡ ಶೌಕತ್ 77,737 ಮತ ಗಳಿಸಿ ಅವರು 11,077 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಎಡರಂಗ (ಸಿಪಿಎಂ) ಅಭ್ಯರ್ಥಿಎಂ. ಸ್ವರಾಜ್ರಿಗೆ 66,660, ತೃಣಮೂಲ ಕಾಂಗ್ರೆಸ್ನ ಪಿ.ವಿ.ಅನ್ವರ್ಗೆ 19,760 ಮತ್ತು ಎನ್ಡಿಎ (ಬಿಜೆಪಿ)ಯ ಮೋಹನ್ ಜೋರ್ಜ್ರಿಗೆ 8648 ಮತಗಳು ಲಭಿಸಿವೆ. ವಿಶೇಷವೇನೆಂದರೆ ನಿಲಂಬೂರು ವಿಧನಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ಗ್ರಾಮ ಪಂಚಾಯತ್ಗಳಿದ್ದು ಇದರಲ್ಲಿ ಏಳರಲ್ಲೂ ಯುಡಿಎಫ್ ಪ್ರಾಬಲ್ಯ ಸಾಧಿಸಿದೆ. ಎಡರಂಗ ಉಮೇದ್ವಾರ ಎಂ. ಸ್ವರಾಜ್ರ ಹುಟ್ಟೂರಾದ ಪೂತ್ತುಕಲ್ ಪಂಚಾಯತ್ ಮಾತ್ರವಲ್ಲ ಅವರು ಈಗ ವಾಸಿಸುತ್ತಿರುವ ನಿಲಂಬೂರು ನಗರಸಭೆಯಲ್ಲಿ ಅವರ ಮತಗಟ್ಟೆಯಲ್ಲೂ ಯುಡಿಎಫ್ ಮೇಲುಗೈ ಸಾಧಿಸಿದೆ. ಇದು ಎಡರಂಗ ಅದರಲ್ಲೂ ಸಿಪಿಎಂಗೆ ಭಾರೀ ಹೊಡೆತ ನೀಡಿದಂತಾಗಿದೆ.

Leave a Reply

Your email address will not be published. Required fields are marked *

You cannot copy content of this page