ಹೊಸ ಬಸ್ ನಿಲ್ದಾಣ ಪ್ರವೇಶಿಸದ ಕೆಎಸ್‌ಆರ್‌ಟಿಸಿ ಬಸ್‌ಗಳು: ಪ್ರಯಾಣಿಕರಿಗೆ ಸಮಸ್ಯೆ

ಕಾಸರಗೋಡು: ಬೇವಿಂಜೆಯಲ್ಲಿ ಸಾರಿಗೆ ಅಡಚಣೆ ಉಂಟಾದುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಕಾಸರಗೋಡು ಹೊಸ ಬಸ್ ನಿಲ್ದಾಣಕ್ಕೆ ಪ್ರವೇಶಿಸುವು ದಿಲ್ಲವೆಂಬ ಆರೋಪವುಂಟಾಗಿದೆ. ಪ್ರೆಸ್‌ಕ್ಲಬ್  ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಹಳೆ ಬಸ್ ನಿಲ್ದಾಣ ಮೂಲಕ ಬಸ್‌ಗಳು ಡಿಪ್ಪೋಗೆ ತೆರಳುತ್ತವೆ. ಇದರಿಂದ ಹೊಸ ಬಸ್ ನಿಲ್ದಾಣ ಮೂಲಕ ಚೆರ್ಕಳ ಭಾಗಕ್ಕೆ ತೆರಳುವವರು ಸಮಸ್ಯೆ ಎದುರಿಸಬೇಕಾಗುತ್ತಿದೆ. ಕೆಎಸ್‌ಆರ್‌ಟಿಸಿಯಿಂದ 10 ರೂಪಾಯಿ ಹೆಚ್ಚುವರಿಯಾಗಿ ನೀಡಿ ಹೊಸ ಬಸ್ ನಿಲ್ದಾಣಕ್ಕೆ ತೆರಳಬೇಕಾದ ಸ್ಥಿತಿ ಉಂಟಾಗಲಿದೆಯೆಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.

ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ  ಎಲ್ಲಾ ಖಾಸಗಿ ಬಸ್‌ಗಳೂ ಹೊಸ ಬಸ್ ನಿಲ್ದಾಣಕ್ಕೆ ತೆರಳಿ ಹಳೆ ಬಸ್ ನಿಲ್ದಾಣಕ್ಕೆ ಸಾಗುತ್ತವೆ. ಪ್ರಯಾಣಿಕರು ದೂರು ನೀಡಿದ ಬಳಿಕ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಹೊಸ ಬಸ್ ನಿಲ್ದಾಣಕ್ಕೆ ತೆರಳುತ್ತಿವೆ. ಜೂನ್ ೧೫ರಂದು ಬೇವಿಂಜೆಯಲ್ಲಿ ಮಣ್ಣು ಕುಸಿದಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಅಡಚಣೆ ಉಂಟಾಗಿತ್ತು. ಇದರಿಂದ ವಾಹನಗಳನ್ನು ಬೇರೆ ರಸ್ತೆಯಲ್ಲಿ ಬಿಡಲಾಗುತ್ತಿದೆ.

You cannot copy contents of this page