ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ಪಿ.ಎಫ್.ಐನ ನಿಗೂಢ ಯೋಜನೆ: ಜಿಲ್ಲಾ ನ್ಯಾಯಾಧೀಶರೂ ಸೇರಿ 977 ನೇತಾರರ ಹತ್ಯೆಗೆ ಹಿಟ್‌ಲಿಸ್ಟ್; ನ್ಯಾಯಾಲಯಕ್ಕೆ ಎನ್‌ಐಎ ವರದಿ ಸಲ್ಲಿಕೆ

ಕೊಚ್ಚಿ: 2047ರೊಳಗಾಗಿ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸುವ ನಿಗೂಢ ಯೋಜನೆಗೆ ನಿಷೇಧಿತ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರೂಪು ನೀಡಿತ್ತೆಂದೂ, ಮಾತ್ರವಲ್ಲ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ಇತರ ಧರ್ಮಕ್ಕೆ ಸೇರಿದ 977 ನೇತಾರರ  ಹತ್ಯೆಗಾಗಿ ಹಿಟ್ ಲಿಸ್ಟನ್ನು ಪಿಎಫ್‌ಐ ತಯಾರಿಸಿತ್ತೆಂದು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಎರ್ನಾಕುಳಂ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಪಾಲಕ್ಕಾಡ್‌ನಲ್ಲಿ ಆರ್‌ಎಸ್‌ಎಸ್ ಶಾರೀರಿಕ್ ಶಿಕ್ಷಕ್ ಪ್ರಮುಖ್  ಶ್ರೀನಿವಾಸರನ್ನು ಕೊಲೆಗೈದ ಪ್ರಕರಣದ ಆರೋಪಿಗಳು ಜಾಮೀನುಕೋರಿ ಸಲ್ಲಿಸಿದ ಅರ್ಜಿಯ ವಿರುದ್ಧ ನ್ಯಾಯಾ ಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಎನ್‌ಐಎ ಈ ವಿಷಯ ತಿಳಿಸಿದೆ.

ಶ್ರೀನಿವಾಸನ್ ಕೊಲೆ ಪ್ರಕರಣದ ತನಿಖೆಯನ್ನು ಕೇರಳ ಪೊಲೀಸರಿಂದ 2022ರಲ್ಲಿ ಡಿಸೆಂಬರ್‌ನಲ್ಲಿ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಈ ಪ್ರಕರಣದ ಆರೋಪಿಗಳು ಹಾಗೂ ಪಿಎಫ್‌ಐ ಕಾರ್ಯಕರ್ತರೂ ಆಗಿರುವ ಮುಹ ಮ್ಮದ್ ಬಿಲಾಲ್, ರಿಯಾಸುದ್ದೀನ್, ಕೆ.ಪಿ. ಅನ್ವರ್, ಮತ್ತು ಕೆ.ವಿ. ಸಹೀರ್ ಜಾಮೀನು ಕೋರಿ ಎನ್‌ಐಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ವಿರುದ್ಧ  ಎನ್‌ಐಎ ನ್ಯಾಯಾ ಲಯಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ ಈ ವಿಷಯ ತಿಳಿಸಲಾಗಿದೆ.

ಈ ಪ್ರಕರಣದ 51ನೇ ಆರೋಪಿ ಸಿರಾಜುದ್ದೀನ್‌ನಿಂದ ವಶಪಡಿಸಲಾದ ಪಟ್ಟಿಯಲ್ಲಿ ಇತರ ಧರ್ಮಕ್ಕೆ ಸೇರಿದ 240 ಮಂದಿಯ ಹೆಸರು ಒಳಗೊಂ ಡಿದೆ. 15ನೇ ಆರೋಪಿ ಅಬ್ದುಲ್ ವಹಾಬ್‌ನಿಂದ ವಶಪಡಿಸಲಾದ ಪಟ್ಟಿಯಲ್ಲಿ ಓರ್ವ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಸೇರಿ ಐದು ಮಂದಿಯ ಹೆಸರು ಒಳಗೊಂಡಿದೆ.

17ನೇ ಆರೋಪಿ ಮೊಹಮ್ಮದ್ ಸಾಧಿಕ್‌ನಿಂದ ಲಭಿಸಿದ ದಾಖಲುಪತ್ರ ವೊಂದರಲ್ಲಿ ಇತರ ಧರ್ಮಕ್ಕೆ ಸೇರಿದ 197 ನೇತಾರರು ಹಾಗೂ ಇನ್ನೊಂದು ದಾಖಲು ಪತ್ರದಲ್ಲಿ 38 ಮಂದಿಯ ಹೆಸರೂ ಒಳಗೊಂಡಿದೆ. 69ನೇ ಆರೋಪಿ ಅಯೂಬ್ ಟಿ.ಯಿಂದ ಲಭಿಸಿದ ದಾಖಲು ಪತ್ರದಲ್ಲಿ ಇತರ 250 ಧರ್ಮಕ್ಕೆ ಸೇರಿದ 5೦೦ ಮಂದಿಯ ಹೆಸರು ಒಳಗೊಂಡಿದೆ. ಇವರನ್ನೆಲ್ಲರನ್ನೂ ಆರೋಪಿಗಳು ತಮ್ಮ ಹಿಟ್ ಲಿಸ್ಟ್‌ನಲ್ಲಿ ಒಳಪಡಿಸಿದ್ದರೆಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಎನ್‌ಐಎ ತಿಳಿಸಿದೆ. ಆರ್‌ಎಸ್‌ಎಸ್ ನೇತಾರ ಶ್ರೀನಿವಾಸನ್‌ರ ಕೊಲೆ ಭಾರೀ ಒಳಸಂಚಿನ ಒಂದು ಭಾಗವಾಗಿದೆ. 2047ರಲ್ಲಿ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸುವ ಆಡಿಯೋ ಕ್ಲಿಪ್ಪಿಂಗ್ ಕೂಡಾ ಲಭಿಸಿದೆ. ಕೇರಳ ಸೇರಿ ದೇಶದ ಹಲವೆಡೆಗಳಲ್ಲಿ ಕೋಮು ಗಲಭೆ ಹಾಗೂ ಭಯೋತ್ಪಾದಕ ಕೃತ್ಯಗಳನ್ನು  ನಡೆಸುವ ಒಳಸಂಚಿಗೂ ರೂಪು ನೀಡಲಾಗಿತ್ತು. ಇತ್ತೀಚೆಗೆ ಕೇರಳದಲ್ಲಿ ನಡೆದ ಕೊಲೆ ಹಾಗೂ ಇತರ ಹಿಂಸಾ ಕೃತ್ಯಗಳಲ್ಲೂ ಪಿಎಫ್‌ಐಯ ಕೈವಾಡವನ್ನು ಕಾಣಬಹುದಾಗಿದೆ ಎಂದೂ ನ್ಯಾಯಾ ಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಎನ್‌ಐಎ ತಿಳಿಸಿದೆ.

Leave a Reply

Your email address will not be published. Required fields are marked *

You cannot copy content of this page