ಸಿಪಿಐ ಮುಖಂಡ ಸಿ.ಕೆ. ಚಿಪ್ಪಾರು 14ನೇ ವಾರ್ಷಿಕ ಸಂಸ್ಮರಣೆ
ಪೈವಳಿಕೆ: ಸಿಪಿಐಯ ಹಿರಿಯ ಮುಖಂಡ ಸಿ.ಕೆ.ಚಿಪ್ಪಾರ್ರವರ 14ನೇ ವಾರ್ಷಿಕ ಸಂಸ್ಮರಣೆ ಇಂದು ಬೆಳಿಗ್ಗೆ ಲಾಲ್ಬಾಗ್ನಲ್ಲಿರುವ ಸ್ಮೃತಿ ಮಂಟಪದಲ್ಲಿ ಜರಗಿತು. ಪುಷ್ಪಾರ್ಚನೆ ಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಜೀವ ಶೆಟ್ಟಿ ಚಿಪ್ಪಾರು ಧ್ವಜಾರೋಹಗೈದರು. ಮಂಜೇಶ್ವರ ಮಂಡಲ ಸಮಿತಿ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರು ಉದ್ಘಾಟಿಸಿದರು. ಸಿ.ಕೆ. ಚಿಪ್ಪಾರುರವರ ಪತ್ನಿ ಮೀನಾಕ್ಷಿ, ಮಾಜಿ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲು, ಲೋರೆನ್ಸ್ ಡಿ’ ಸೋಜಾ, ರೇಖಾ ಚಿಪ್ಪಾರು, ಚನಿಯ ಕೊಮ್ಮಂಗಳ, ಕೇಶವ ಬಾಯಿಕಟ್ಟೆ, ಸುನಿತಾ ವಲ್ಟಿ, ಅಶೋಕ್ ಎಂ.ಸಿ., ಅಜಿತ್ ಎಂ.ಸಿ, ಅಶ್ವತ್ಥ್ ಪೂಜಾರಿ ಉಪಸ್ಥಿತರಿದ್ದರು. ಸಿಪಿಐ ಲೋಕಲ್ ಸಮಿತಿ ಕಾರ್ಯದರ್ಶಿ ಸಮದ್ ಬಿ.ಎ ಸ್ವಾಗತಿಸಿ, ಸುದಾನಂದ ಬಾಯಾರು ವಂದಿಸಿದರು.