ಮುಸ್ಲಿಂ ಲೀಗ್ ಮುಖಂಡ ನಿಧನ
ಕಾಸರಗೋಡು: ಮುಸ್ಲಿಂ ಲೀಗ್ ಜಿಲ್ಲಾ ಕೌನ್ಸಿಲ್ ಸದಸ್ಯ ಆಲಂಪಾಡಿ ನಾಲತ್ತಡ್ಕ ನಿವಾಸಿ ಸಿ.ಬಿ. ಮೊಹಮ್ಮದ್ ಹಾಜಿ ಸೂರ್ಲು (81) ನಿಧನ ಹೊಂದಿದರು. ಸೂರ್ಲು ಹೈದ್ರೋಸ್ ಜುಮಾ ಮಸೀದಿ ಅಧ್ಯಕ್ಷರಾಗಿ ಹಲವು ಕಾಲ ದುಡಿದಿದ್ದರು. ಮೃತರು ಪತ್ನಿ ನಫೀಸ, ಮಕ್ಕಳಾದ ಬದ್ರುದ್ದೀನ್, ಸುಹ್‌ರಾ, ನಸೀಮ, ಅಳಿಯಂದಿರಾದ ಅಬ್ಬಾಸ್, ಸಿ.ಎಂ. ಅಬ್ದುಲ್ಲ, ಸೊಸೆ ರಾಶಿದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.