ಸಿಪಿಎಂ ಮುಖಂಡ ಲೋಕಯ್ಯ ಪೂಜಾರಿ ಸಂಸ್ಮರಣೆ
ಬೇಕೂರು: ಬೊಳ್ಳಾರು ನಿವಾಸಿ, ಸಿಪಿಎಂ ನೇತಾರ ಲೋಕಯ್ಯ ಪೂಜಾರಿ ಯವರ ೮ನೇ ವಾರ್ಷಿಕ ಸಂಸ್ಮರಣೆ ಬೇಕೂರು ಸುಭಾಷ್ನಗರದಲ್ಲಿ ನಡೆ ಯಿತು. ಲೋಕಯ್ಯ ಪೂಜಾರಿಯವರ ಸಹೋದರರಾದ ಕೃಷ್ಣಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಲೋ ಕಲ್ ಕಮಿಟಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬೋಳ್ಳಾರು ಉದ್ಘಾಟಿಸಿ ಮಾತನಾ ಡಿದರು. ಏರಿಯಾ ಕಮಿಟಿ ಸದಸ್ಯ ಡಿ. ಕಮಲಾಕ್ಷ, ಲೋಕಲ್ ಕಮಿಟಿ ಸದಸ್ಯ ಪ್ರವೀಣ್, ಪಾರ್ವತಿ, ಸಜಾನ್ ಮಂಗಲ್ಪಾಡಿ, ಪಂ. ಸದಸ್ಯೆ ಸುಜಾತಾ ಯು. ಶೆಟ್ಟಿ ಹಾಗೂ ಹಿರಿಯ ನೇತಾರ ದಾಮೋದರ್ ಕನ್ನಟಿಪಾರೆ, ಯುವಶಕ್ತಿ ಅಧ್ಯಕ್ಷ ಮನೋಜ್ ಕುಮಾರ್, ಗ್ರಂಥಾಲಯ ಅಧಕ್ಷ ಲಕ್ಷ್ಮಣ ಪೂಜಾರಿ ಬೋಳ್ಳಾರು ಉಪಸ್ಥಿತರಿದ್ದರು. ಸಿಪಿಎಂ ಬೇಕೂರು ಬ್ರಾಂಚ್ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬೋಳ್ಳಾರು ಸ್ವಾಗತಿಸಿ, ಖಾಲಿದ್ ಜೋಡುಕಲ್ಲು ವಂದಿಸಿದರು.