ಗುಡ್ಡೆ ಕುಸಿದು ಮನೆ ಹಾನಿ: ಬಸ್ಚಾಲಕನ ಕುಟುಂಬ ಅಪಾಯದಿಂದ ಪಾರು
ವರ್ಕಾಡಿ: ಗುಡ್ಡೆ ಕುಸಿದು ಬಿದ್ದು ಕಾಂಕ್ರಿಟ್‌ಮನೆ ಹಾನಿಗೀಡಾಗಿ ಮನೆ ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಸಂಭವಿಸಿದೆ. ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಕೊಡ್ಲಮೊಗರು ಪತ್ತಾಯಿಲ್‌ತ್ತಾಡಿ ನಿವಾಸಿ, ಬಸ್ ಚಾಲಕ ಹರೀಶ ಭಂಡಾರಿಯವರ ಮನೆ ಹಾನಿಗೊಂಡಿದೆ. ಗುರುವಾರ ಮುಂಜಾನೆ ಸುಮಾರು 2ಗಂಟೆ ವೇಳೆ ಸುರಿದ ಧಾರಾಕಾರ ಮಳೆಗೆ ಮನೆಯ ಹಿಂಬದಿಯಲ್ಲಿರುವ ಬೃಹತ್ ಗುಡ್ಡೆ ಕುಸಿದು ಬಿದ್ದಿದೆ. ಇದರಿಂದ ಗೋಡೆ ಪೂರ್ತಿ ಕುಸಿದು ಬಿದ್ದು ಮಣ್ಣು ಒಳಗೆ ಸೇರಿದೆ. ಶಬ್ದ ಕೇಳಿ ಮನೆಯ ಸದಸ್ಯರು ಹೊರಗಡೆ ಓಡಿ ಹೋದುದರಿಂದ ಅಪಾಯದಿಂದ ಪಾರಾಗಿದ್ದಾರೆ.
ಮನೆ ಸಾಮಾಗ್ರಿಗಳು ಮಣ್ಣಿನಲ್ಲಿ ಹೂತು ಹೋಗಿದೆ. ಗೋಡೆಗಳು ಕುಸಿದು ಬಿದ್ದಿರುವುದರಿಂದ ಮನೆ ಯಾವುದೇ ಕ್ಷಣದಲ್ಲಿ ಧರಾಶಾಯಿಯಾಗಲಿದೆ. ಈಗ ಕುಟುಂಬ ಬೇರೆಡೆಗೆ ಸ್ಥಳಾಂತರಗೊAಡಿದೆ. ಘಟನೆ ಸ್ಥಳಕ್ಕೆ ವರ್ಕಾಡಿ ಪಂಚಾಯತ್, ವಿಲೇಜ್ ಕಚೇರಿ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.