ಪೈವಳಿಕೆಯಲ್ಲಿ ಉಮ್ಮನ್ ಚಾಂಡಿ ಸಂಸ್ಮರಣೆ
ಪೈವಳಿಕೆ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಸಂಸ್ಮರಣೆ ಕಾಲಘಟ್ಟದ ಅನಿವಾರ್ಯತೆಯಾಗಿದೆ ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಹೇಳಿದರು. ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಉಮ್ಮನ್ ಚಾಂಡಿ ಯವರ ಎರಡನೇ ವಾರ್ಷಿಕ ಸಂಸ್ಮರಣಾ ಕಾರ್ಯ್ರಮದಲ್ಲಿ ಅವರು ಮಾತನಾಡಿ ದರು. ಉಮ್ಮನ್ ಚಾಂಡಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋಹನ ರೈ, ನಾರಾಯಣ ಏದಾರ್, ಕಾರ್ಯದರ್ಶಿಗಳಾದ ರಾಘವೇಂದ್ರ ಭಟ್, ಸಚ್ಚಿದಾನಂದ ರೈ, ಅಬ್ದುಲ್ಲ ಹಾಜಿ, ಗಂಗಾಧರ ನಾಯಕ್, ನೌಶಾದ್ ಪಟ್ಲ, ಚನಿಯಪ್ಪ, ಎಡ್ವರ್ಡ್, ಸುಂದರ ಕಯ್ಯಾರು, ಪೀಟರ್ ಡಿ’ಸೋಜ ಭಾಗವಹಿಸಿದರು. ಶಾಜಿ ಎನ್.ಸಿ. ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು.