ತೆಂಗಿನಕಾಯಿ ಕಳವು: ಇಬ್ಬರು ಆರೋಪಿಗಳ ಬಂಧನ
ಮಂಜೇಶ್ವರ: ಮನೆಯ ಶೆಡ್ನಿಂದ ಹಾಡಹಗಲೇ ತೆಂಗಿನಕಾಯಿಗಳನ್ನು ಕಳವುಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗ ಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ಜೆ.ಎಂ. ರೋಡ್ನ ಅಹಮ್ಮದ್ ಬಶೀರ್ (50), ಕುಂಜತ್ತೂರು ಮಾಡದ ದಿನೇಶ್ (50) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.
ಈ ತಿಂಗಳ 16ರಂದು ಕುಂಜತ್ತೂರು ಕೊಳಕೆಯ ಹರೀಶ್ ಪಿ.ಕೆ ಎಂಬವರ ಮನೆ ಬಳಿಯ ಶೆಡ್ನಿಂದ 200 ತೆಂಗಿನಕಾಯಿ ಕಳವಿಗೀಡಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತಲುಪಿದ ಕಳ್ಳರು ತೆಂಗಿನಕಾಯಿ ಕಳವುನಡೆಸಿದ್ದರು. ಈ ಬಗ್ಗೆ ಹರೀಶ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿಗಳ ಕುರಿತು ಸೂಚನೆ ಲಭಿಸಿತ್ತು. ಇದರಿಂದ ಅವರನ್ನು ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ.