ಬಡ ಕುಟುಂಬದ ಹೆಂಚಿನ ಮನೆ ಛಾವಣಿ ಕುಸಿತ

ನೀರ್ಚಾಲು:  ಧಾರಾಕಾರ ಮಳೆ, ಗಾಳಿಗೆ ಹೆಂಚಿನ ಮನೆಯ ಮೇಲ್ಛಾವಣಿ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಕುಟುಂಬ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಚೆನ್ನೆಗುಳಿ ನಿವಾಸಿ ಮಾಯಿಲ ಎಂಬವರ ಮನೆ ನಿನ್ನೆ ರಾತ್ರಿ ಕುಸಿದಿದೆ. ಈ ವೇಳೆ ಮನೆಯೊಳಗಿದ್ದವರು ಶಬ್ದ ಕೇಳಿ ಹೊರಗೆ ಓಡಿದ್ದು ಇದರಿಂದ ಭಾರೀ ಅಪಾ ಯದಿಂದ ಪಾರಾಗಿದ್ದಾರೆ. ಮೇಲ್ಛಾವಣಿಯ ಉಳಿದ ಭಾಗ ಯಾವುದೇ ಸಮಯದಲ್ಲಿ  ಕುಸಿಯುವ ಸಾಧ್ಯತೆ ಇದೆಯೆನ್ನಲಾಗಿದೆ.

ಹದಿನೇಳು ವರ್ಷಗಳ ಹಿಂದೆ  ನಿರ್ಮಿಸಿದ ಮನೆ ಇದಾಗಿದೆ. ಈ ಮನೆ ಕುಸಿಯುವುದರೊಂದಿಗೆ ಕುಟುಂಬಕ್ಕೆ ವಾಸ ಸೌಕರ್ಯವಿಲ್ಲದಾಗಿದೆ. ಸರಕಾರದ ಲೈಫ್ ವಸತಿ ಯೋಜನೆಯಲ್ಲಿ ಮಾಯಿಲರ ಹೆಸರಿದೆಯೆಂದು ಹೇಳಲಾಗುತ್ತಿದ್ದರೂ ಇವರಿಗೆ ಮನೆ ಮಂಜೂರಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ  ಮನೆ ದೊರಕಿಸಿಕೊಡಬೇಕೆಂದು ಕುಟುಂಬ ಆಗ್ರಹಿಸುತ್ತಿದೆ.

RELATED NEWS

You cannot copy contents of this page