ಬಿಜೆಪಿ ಹಿರಿಯ ಕಾರ್ಯಕರ್ತ ನಿಧನ
ಮಂಜೇಶ್ವರ: ಕೊಡ್ಲಮೊಗರು ಬಳಿಯ ಕೊಣಿಬೈಲು ನಾಣಿಲ್ತಾಡಿ ನಿವಾಸಿ ಕೃಷಿಕ, ಹಿರಿಯ ಬಿಜೆಪಿ ಕಾರ್ಯಕರ್ತ ರಾಘವ ಬೆಳ್ಚಾಡ (76) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಮಧ್ಯಾಹ್ನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಮಕ್ಕಳಾದ ಕಾರ್ತೀಶ್ (ಬಿಜೆಪಿ ಮಂಡಲ ಕಮಿಟಿ ಸದಸ್ಯ), ಸುನೀತಾ, ವನಿತಾ, ಮಮತಾ, ಸುಖಲತಾ, ಸೊಸೆ ಮಲ್ಲಿಕಾ, ಅಳಿಯಂದಿರಾದ ಯಾದವ, ರಾಧಾಕೃಷ್ಣ, ಮೋಹನ, ದಾಮೋದರ, ಸಹೋದರಿ ಶಾರದಾ, ಸಹೋದರ ರಾದ ಮಾಧವ, ವಿಶ್ವನಾಥ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಪತ್ನಿ ಸೀತಾ ಈ ಹಿಂದೆ ನಿಧನ ರಾಗಿದ್ದಾರೆ. ಮೃತರ ಮನೆಗೆ ಬಿಜೆಪಿ ಹಾಗೂ ವಿವಿಧ ರಾಜಕೀಯ ನೇತಾ ರರು ಸಹಿತ ಹಲವು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.